For Quick Alerts
  ALLOW NOTIFICATIONS  
  For Daily Alerts

  ದೊಡ್ಡತೆರೆಗೆ ಯಶ್ ಎಂಬ ಹ್ಯಾಂಡ್ಸಮ್ ಹುಡುಗ

  By Staff
  |

  ಸೀರಿಯಲ್ಲಿನ ಹುಡುಗರು ಸಿನಿಮಾ ರಂಗಕ್ಕೆ ಕಾಲಿಡುವುದಕ್ಕೆ ಆರಂಭಿಸಿ ಬಹಳ ಕಾಲವೇ ಆಗಿದೆ. ಈಟಿವಿಯ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯನ್ನು ನೀವು ನೋಡಿದ್ದರೆ ಅದರಲ್ಲಿನ 'ಶರತ್' ಹೆಸರಿನ ಪಾತ್ರಧಾರಿ 'ಯಶ್' ನಿಮ್ಮ ಗಮನ ಸೆಳೆದಿರುತ್ತಾನೆ. ಈಗ ಆತ ಹಿರಿತೆರೆಗೆ ಜಿಗಿದಿದ್ದಾನೆ. ಮೂಲತಃ ಮೈಸೂರಿನವರಾದ ಯಶ್ ಅವರ ಕುಟುಂಬಕ್ಕೆ ಚಿತ್ರರಂಗದ ಹಿನ್ನಲೆಯಿಲ್ಲ. ಅವರ ಮನೆಯಲ್ಲಿ ಯಾರಿಗೂ ನಟನೆಯ ಹುಚ್ಚಿಲ್ಲ. ಆದರೂ ಯಶ್‌ನ ಯಶಸ್ಸಿಗೆ ಸಿನಿಮಾ ಎಂಬ ಮಾಯಾಲೋಕದ ಸೆಳತವೇ ಕಾರಣವಂತೆ.

  ಮೊದಲೆಲ್ಲಾ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಅಭಿನಯವನ್ನು ಮೈಗೂಡಿಸಿಕೊಂಡ ಯಶ್ ಹಂತಹಂತವಾಗಿ ನಾಟಕದಿಂದ ಕಿರುತೆರೆಗೆ ಬಂದವರು. ಅಲ್ಲಿ ನಂದಗೋಕುಲ, ಮಳೆಬಿಲ್ಲು, ಶಿವ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ನಂತರ ಬೆಳ್ಳಿತೆರೆಯ 'ಜಂಭದ ಹುಡುಗಿ' ಚಿತ್ರದಲ್ಲಿ ಎರಡನೇ ನಾಯಕ ನಟನಾಗಿ ನಟಿಸಿದ್ದರು.ಆನಂತರ 'ಮೊಗ್ಗಿನ ಮನಸ್ಸು' ಚಿತ್ರದ ನಾಯಕರಲ್ಲಿ ಒಬ್ಬರಾಗಿದ್ದರು. ಈಗ 'ರಾಕಿ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

  'ರಾಕಿ' ಪ್ರೇಮಕಥಾ ಹಂದರವನ್ನು ಹೊಂದಿರುವ ಪ್ರೇಕ್ಷಕರಿಗೆ ಹತ್ತಿರವಾಗುವ ಆಕ್ಷನ್ ಪ್ರಧಾನ ಚಿತ್ರ. ಲವ್ ಸಬ್ಜೆಕ್ಟ್ ಅಥವಾ ಆಕ್ಷನ್ ಅಂತೇನಿಲ್ಲ, ಎಲ್ಲಾ ರೀತಿಯ ಪಾತ್ರಗಳಲ್ಲೂ ನಟಿಸೋದು ನನಗಿಷ್ಟ. ಸಿನಿಮ ಕ್ಯಾನ್‌ವಾಸ್ ದೊಡ್ಡದು, ಅಲ್ಲಿ ಹೊರಾಂಗಣ ಚಿತ್ರೀಕರಣವೇ ಹೆಚ್ಚು. ಧಾರಾವಾಹಿಗಳಲ್ಲಿ ಒಳಾಂಗಣ ಚಿತ್ರೀಕರಣ ಜಾಸ್ತಿ. ಟಿವಿ ನಟನೆಗೂ, ಸಿನಿಮಾ ನಟನೆಗೂ ಅಂತಾ ವ್ಯತ್ಯಾಸ ಏನೂ ಇಲ್ಲ ಎನ್ನುತ್ತಾರೆ ಯಶ್.

  ನಟ ದರ್ಶನ್ ಸಹಾ ಒಂದು ಕಾಲದಲ್ಲಿ ಸೀರಿಯಲ್ಲಿಗೆ ಅಂಟಿಕೊಂಡಿದ್ದವರು. 'ಮೆಜೆಸ್ಟಿಕ್' ಎಂಬ ಸಿನಿಮಾ ಅವರನ್ನು ಮುಟ್ಟಲಾರದಷ್ಟು ಎತ್ತರಕ್ಕೆ ಏರಿಸಿಬಿಟ್ಟಿತು. ಶ್ರೀನಗರ ಕಿಟ್ಟಿ ಸೀರಿಯಲ್ಲಿಂದ ಸಿನಿಮಾಗೆ ಬಂದು ಇದೀಗ 'ಇಂತಿ ನಿನ್ನ ಪ್ರೀತಿಯ' ಚಿತ್ರದ ಮೂಲಕ ದೊಡ್ಡ ಹೆಸರು ಸಂಪಾದಿಸಿದ್ದಾರೆ.

  ಅದಾದ ಮೇಲೂ ಅನೇಕ ಹುಡುಗರು ಸೀರಿಯಲ್ಲನ್ನೇ ಸ್ಪ್ರಿಂಗ್‌ಬೋರ್ಡ್ ಮಾಡಿಕೊಂಡು ಹಿರಿತೆರೆಗೆ ಜಿಗಿಯುವ ಪ್ರಯತ್ನ ಮಾಡಿದ್ದುಂಟು. ಚೇತನ್, ಕಿಶೋರ್ ಮುಂತಾದವರು ಅಲ್ಲಿಂದಲೇ ಬಂದವರು.

  ಕಳೆದ ವರ್ಷ ರಾಜಶೇಖರ್ ನಿರ್ದೇಶಿಸಿದ 'ಒಂದು ಪ್ರೀತಿಯ ಕತೆ 'ಯ ಮೂಲಕ ನಾರಾಯಣ ಸ್ವಾಮಿ ಮತ್ತ್ತು ಶಂಕರ್ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆದರೆ, ಆ ಚಿತ್ರ ಗೆದ್ದಿರಲಿಲ್ಲ. ಅಲ್ಲಿಗೆ ಈ ಹುಡುಗರ ಸೀಮೋಲ್ಲಂಘನೆಯೂ ಯಶಸ್ವಿಯಾಗಲಿಲ್ಲ.

  ಇದೀಗ ಯಶ್ ನಟಿಸುತ್ತ್ತಿರುವ 'ರಾಕಿ' ಚಿತ್ರಕ್ಕೆ ಮುಂಬೈನಿಂದ ಬಿಯಾಂಕ ದೇಸಾಯಿ ಎಂಬ ಸುಂದರಿಯನ್ನು ಕರೆತರಲಾಗಿದೆ. ಯಶ್ ಯಶಸ್ಸು ಕಾಣಲಿ ಎಂದು ಹಾರೈಸುವುದಷ್ಟೇ ಈಗ ನಾವು ಮಾಡಬಹುದಾದದ್ದ್ದು.

  (ದಟ್ಸ್‌ಕನ್ನಡ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X