»   » ಕಾಸರವಳ್ಳಿ ನಿರ್ದೇಶನದ ಟೆಲಿಫಿಲ್ಮ್‌

ಕಾಸರವಳ್ಳಿ ನಿರ್ದೇಶನದ ಟೆಲಿಫಿಲ್ಮ್‌

Posted By: Staff
Subscribe to Filmibeat Kannada
kasaravallis
ಮಡಿಕೇರಿ: ಮಡಿಕೇರಿಯ ಜನವರಿ ಚಳಿಯಲ್ಲಿ ಬೆಚ್ಚನೆಯ ಅನುಭವ ಚಿತ್ರ ರಸಿಕ ಹಾಗೂ ಚಿತ್ರ ವಿದ್ಯಾರ್ಥಿಗಳಿಗೆ. ಯಾಕೆಂದರೆ ಅಲ್ಲಿ ತನ್ಮಯತೆಯಿಂದ ಅಡ್ಡಾಡುತಿದ್ದವರು ನಾಲ್ಕು ಬಾರಿ ಸ್ವರ್ಣ ಕಮಲ (ಘಟಶ್ರಾದ್ಧ, ತಬರನ ಕತೆ, ತಾಯಿಸಾಹೇಬ, ದ್ವೀಪ )ವಿಜೇತ ,ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ನಿರ್ದೇಶಕ 'ಗಿರೀಶ್‌ ಕಾಸರವಳ್ಳಿ" . ಅವರು ದೂರದರ್ಶನಕ್ಕಾಗಿ ನಿರ್ದೇಶಿಸುತ್ತಿರುವ ಹೊಸ ಟೆಲಿ ಚಿತ್ರ 'ಒಂದು ಸಾವಿನ ಸುತ್ತ" ಚಿತ್ರಿಕರಣ ಗೊಂಡಿತು.

ಕಾಸರವಳ್ಳಿಯವರು ಇಪ್ಪತ್ತೆೈದು ವರ್ಷದಲ್ಲಿ ನಿರ್ದೇಶಿಸಿದ್ದು ಒಂಬತ್ತು ಚಿತ್ರ . ಆದರೆ ಎಲ್ಲ ಚಿತ್ರಗಳಿಗೂ ಪುರಸ್ಕಾರಗಳ ಸುರಿಮಳೆ. ಅವರ ಚೊಚ್ಚಲ ನಿರ್ದೇಶನ, ವಿದ್ಯಾರ್ಥಿಯಾಗಿದ್ದಾಗ ನಿರ್ಮಿಸಿದ ಟೆಲಿಚಿತ್ರ 'ಅವಶೇಷ" ರಾಷ್ಟ್ರೀಯ ಪುರಸ್ಕಾರಕ್ಕೆ (ರಾಷ್ಟ್ರಪತಿ ಪದಕ) ಪಾತ್ರವಾಗಿತ್ತು.

ಮಡಿಕೇರಿಯ ಕುಟುಂಬ ಒಂದರಲ್ಲಿ ಸಾವು ಸಂಭವಿಸಿದ ಬಳಿಕ ಕಂಡುಕೊಳ್ಳುವ ಸಾಮಾಜಿಕ ಬದಲಾವಣೆಯನ್ನು ಆಧರಿಸಿ ಚಿತ್ರಕತೆ ಹೆಣೆದಿದ್ದಾರೆ. ಕಾಸರವಳ್ಳಿಯ ನೆಚ್ಚಿನ ನಟರಾದ 'ನೀನಾಸಂ" ಅಚ್ಯುತ, ಪುರುಶೋತ್ತಮ್‌, ಹಂಸ, ಹಾಗೂ ವೀರನಾಡು ಪತ್ರಿಕೆಯ ಸಂಪಾದಕ ಕಾರ್ಯಪ್ಪ ,ಲೋಹಿತಾಶ್ವ ಮುಂತಾದವರು ಪ್ರಮುಖ ಅಭಿನೇತ್ರಿಗಳು. ಚಿತ್ರವನ್ನು ತಮ್ಮ ಮಸೂರದಲ್ಲಿ ಸೆರೆ ಹಿಡಿದವರು ರಾಷ್ಟ್ರೀಯ ಖ್ಯಾತಿಯ ರಾಮಚಂದ್ರ. ಮಡಿಕೇರಿಯ ರಾಜಸೀಟ್‌, ಸೀನಿಯರ್‌ ಕಲೇಜು ಮೈದಾನ, ವೀರನಾಡು ಪ್ರೆಸ್‌, ಗ್ಯಾರೇಜ್‌ ಒಂದರಲ್ಲಿ ಚಿತ್ರೀಕರಣ ಸಾಗಿತ್ತು. ಈ ಟೆಲಿಚಿತ್ರವನ್ನು ಸ್ವತಃ ಕಾಸರವಳ್ಳಿಯವರೇ ನಿರ್ಮಿಸುತಿದ್ದಾರೆ. ಚಿತ್ರ ಸಂಕಲನಕಾರ ಸ್ವಾಮಿ ಸೇರಿದಂತೆ ಕಾಸರವಳ್ಳಿ ಬಳಗವು 15 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣವನ್ನು ಹುರುಪಿನಿಂದ ಪೂರ್ಣಗೊಳಿಸಿದೆ.

English summary
kasaravallis new telefilm ondu savina sutha
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada