»   » ‘ಸೈನೈಡ್‌’ ಚಿತ್ರದಲ್ಲಿ ಮಾಳವಿಕ, ಬಿ.ಸಿ.ಪಾಟೀಲ್‌

‘ಸೈನೈಡ್‌’ ಚಿತ್ರದಲ್ಲಿ ಮಾಳವಿಕ, ಬಿ.ಸಿ.ಪಾಟೀಲ್‌

Subscribe to Filmibeat Kannada

ಬಹುದಿನಗಳ ನಂತರ ನಿರ್ಮಾಪಕ, ನಟ, ಹಾಲಿ ಶಾಸಕ ಮತ್ತು ಭಾವೀ ಸಚಿವ(?) ಬಿ.ಸಿ.ಪಾಟೀಲ್‌, ಬಣ್ಣ ಹಚ್ಚಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿರುವ ‘ಸೈನೈಡ್‌’ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.

ಮಾಜಿ ಪ್ರಧಾನಿ ದಿವಂಗತ ರಾಜೀವ್‌ ಗಾಂಧಿ ಹತ್ಯಾಕಾಂಡವನ್ನು ವಸ್ತುವಾಗಿಟ್ಟುಕೊಂಡು ಈ ಚಿತ್ರ ತಯಾರಾಗುತ್ತಿದೆ. 25ದಿನಗಳ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಫೆಬ್ರವರಿಯಲ್ಲಿ ಚಿತ್ರದ ಧ್ವನಿಮುದ್ರಣ ಕಾರ್ಯ ಆರಂಭಗೊಳ್ಳಲಿದೆ ಎನ್ನುತ್ತಾರೆ ನಿರ್ಮಾಪಕ ಮುರಳೀಧರ ಹಾಲಪ್ಪ .

‘ಮಾಯಾಮೃಗ’, ‘ಮುಕ್ತ’ ಸೇರಿದಂತೆ ಕಿರುತೆರೆಯಲ್ಲಿ ಸಾಕಷ್ಟು ಬ್ಯುಸಿಯಾಗಿರುವ ಮಾಳವಿಕ, ಈ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ರವಿಕಾಳೆ, ಅವಿನಾಶ್‌, ತಾರಾ, ಸುರೇಶ್‌ ಹೆಬ್ಳೀಕರ್‌, ರಂಗಾಯಣ ರಘು, ಶೋಭರಾಜ್‌, ಮುನಿ, ಪ್ರೀತಿ ಮತ್ತಿತರರು ತಾರಾಗಣದಲ್ಲಿದ್ದಾರೆ.

ಎಂ.ಆರ್‌.ರಮೇಶ್‌ ನಿರ್ದೇಶನದ ಈ ಚಿತ್ರಕ್ಕೆ ಛಾಯಾಗ್ರಾಹಕ ರತ್ನವೇಲು ಕ್ಯಾಮೆರ ಹಿಡಿದಿದ್ದಾರೆ. ಎಲ್‌ಟಿಟಿಇ ಉಗ್ರರಾದ ಶಿವರಸನ್‌ ಮತ್ತು ಶುಭಾ ಪಾತ್ರಗಳನ್ನು, ಚಿತ್ರದಲ್ಲಿ ವೈಭವೀಕರಿಸದೆ, ನೈಜವಾಗಿ ಬಿಂಬಿಸಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

ನೈಜ ಘಟನೆಗಳನ್ನು ಚಿತ್ರವನ್ನಾಗಿಸುವ ಪರಿಪಾಠ ನಮ್ಮಲ್ಲಿದೆ. ವೀರಪ್ಪನ್‌ ಮತ್ತು ಡೆಡ್ಲಿ ಸೋಮ ಮತ್ತಿತರ ಚಿತ್ರಗಳಲ್ಲಿ, ದುಷ್ಟರನ್ನು ಮೆರೆಸುವ ಕೆಲಸ ಸಾಕಷ್ಟಾಗಿದೆ. ‘ಸೈನೈಡ್‌’ನಲ್ಲಿ ಇನ್ನೇನಾಗಿದೆಯೋ?

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada