For Quick Alerts
  ALLOW NOTIFICATIONS  
  For Daily Alerts

  ನಟಿ ಮೇಲೆ ಮಾನಭಂಗದ ಯತ್ನ

  By Staff
  |

  ಈಕೆಯ ಹೆಸರು ವಿಂಧ್ಯಾ. ಉದಯೋನ್ಮುಖ ತಮಿಳು ನಟಿ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿಗೆ ಚಿತ್ರದ ಚಿತ್ರೀಕರಣಕ್ಕಾಗಿ ಬಂದಿದ್ದ ವಿಂಧ್ಯಾ ಅನುಭವಿಸಿದ ಸಂಕಟ ಅಷ್ಟಿಷ್ಟಲ್ಲ .

  ಹೊಟೇಲೊಂದರಲ್ಲಿ ಉಳಿದುಕೊಂಡಿದ್ದ ವಿಂಧ್ಯಾಳ ಮೇಲೆ ಸ್ಥಳೀಯ ಉದ್ಯಮಿಯಾಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ಈಗ ಪೊಲೀಸರ ಆತಿಥ್ಯ ಅನುಭವಿಸುತ್ತಿದ್ದಾನೆ. ಈ ಘಟನೆ ನಡೆದದ್ದು ಫೆ.26ರ ಗುರುವಾರ.

  ಹೊಟೇಲಿನ ಹಿಂದಿನ ಬಾಗಿಲಿನಿಂದ ಕೋಣೆ ಪ್ರವೇಶಿಸಿರುವ ಸ್ಥಳೀಯ ಉದ್ಯಮಿ ವಿಂಧ್ಯಾಳ ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ. ಆ ಸಮಯದಲ್ಲಿ ಆತ ಪಾನಮತ್ತನಾಗಿದ್ದ ಎನ್ನಲಾಗಿದ್ದ . ಕೋಣೆಯಲ್ಲಿಯೇ ಇದ್ದ ನಟಿಯ ತಂದೆ ಯೋಗಾನಂದ್‌ ಹಾಗೂ ಕೆಮರಾಮನ್‌ ರಮಣ ಅವರು ಉದ್ಯಮಿಯನ್ನು ತಡೆಯುವ ಪ್ರಯತ್ನಗಳು ಯಶಸ್ವಿಯಾಗಲಿಲ್ಲ . ಕೊನೆಗೆ ಅಕ್ಕಪಕ್ಕದ ಕೋಣೆಗಳ ಸಹನಟರು ವಿಂಧ್ಯಾಳ ಕೋಣೆಗೆ ಧಾವಿಸಿದ್ದರಿಂದ ಅನಾಹುತ ತಪ್ಪಿಹೋಯಿತು.

  ನಟಿಯಾಬ್ಬಳ ಮೇಲೆ ಅತ್ಯಾಚಾರದ ಪ್ರಯತ್ನ ನಡೆದಿದ್ದರೂ ಪೊಲೀಸರು ಮಾತ್ರ ತಕ್ಷಣ ಕಾರ್ಯಶೀಲರಾಗಿಲ್ಲ . ಸ್ಥಳೀಯ ಉದ್ಯಮಿ ಪ್ರಭಾವಿಯಾಗಿರುವುದೇ ಇದಕ್ಕೆ ಕಾರಣ. ನಾಯಕ ನಟ ಹಾಗೂ ನಡಿಗರ್‌ ಸಂಗಮ್‌ ಅಧ್ಯಕ್ಷ ವಿಜಯಕಾಂತ್‌ ಮಧ್ಯಪ್ರವೇಶಿಸಿದ ನಂತರವೇ ಪೊಲೀಸರು ದೂರು ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

  ಸಿನಿಮಾ ನಟಿಯ ಪಾಡೇ ಹೀಗಾದರೆ ಇನ್ನು ಬಡಪಾಯಿ ಹೆಣ್ಣುಮಕ್ಕಳ ಪಾಡೇನು ?

  (ಏಜನ್ಸೀಸ್‌)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X