»   » ನಿರ್ಮಾಪಕರ ಸಂಘಕ್ಕೆ ಸಂದೇಶ್‌ನಾಗರಾಜ್‌ ಸಾರಥ್ಯ

ನಿರ್ಮಾಪಕರ ಸಂಘಕ್ಕೆ ಸಂದೇಶ್‌ನಾಗರಾಜ್‌ ಸಾರಥ್ಯ

Subscribe to Filmibeat Kannada

ಬೆಂಗಳೂರು : ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಅಧ್ಯಕ್ಷರಾಗಿ ಸಂದೇಶ್‌ನಾಗರಾಜ್‌ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಬಸಂತ್‌ಕುಮಾರ್‌ ಪಾಟೀಲ್‌ ಅಧಿಕಾರಾವಧಿ ಅಂತ್ಯಗೊಂಡ ಕಾರಣ ಚುನಾವಣೆ ನಡೆಸಲಾಯಿತು. ನಿರ್ಮಾಪಕ -ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಸ್ಪರ್ಧೆಯಿಂದ ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದು ಅವಿರೋಧ ಆಯ್ಕೆಗೆ ನೆರವಾದರು.

ಇನ್ನುಳಿದ ಪದಾಧಿಕಾರಿಗಳು : ಉಪಾಧ್ಯಕ್ಷರಾಗಿ ಎನ್‌.ಕುಮಾರ್‌, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಕೆ.ರಾಮಕೃಷ್ಣ , ಜಂಟಿ ಕಾರ್ಯದರ್ಶಿಯಾಗಿ ಎ.ಗಣೇಶ, ಕೋಶಾಧ್ಯಕ್ಷರಾಗಿ ಕನ್ನಡ ಸೋಮು ಆಯ್ಕೆಗೊಂಡಿದ್ದಾರೆ.

ಜೋಸೈಮನ್‌, ರಾಕ್‌ ಲೈನ್‌ ವೆಂಕಟೇಶ್‌, ಆರ್‌.ಎಸ್‌. ಗೌಡ, ಎಂ. ವೆಂಕಟೇಶ್‌, ಉಮೇಶ್‌ ಬಣಕಾರ, ಜೆ.ಜಿ.ಕೃಷ್ಣ, ಬಿ.ಆರ್‌.ಕೇಶವ, ಎಚ್‌.ಆರ್‌.ಮಧುಸೂದನ ರೆಡ್ಡಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

ಸಂಘಕ್ಕೆ ಚೈತನ್ಯ : ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ನಿರ್ಮಾಕರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ನೂತನ ಅಧ್ಯಕ್ಷ ಸಂದೇಶ್‌ ನಾಗರಾಜ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘದ ಸದಸ್ಯತ್ವ ಶುಲ್ಕವನ್ನು 50,000ರೂ.ಗಳಿಗೆ ನಿಗಧಿ ಪಡಿಸಲಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನದ ಮೊದಲ ಪ್ರದರ್ಶನದ ಹಣವನ್ನು ನಿರ್ಮಾಪಕರು ಸಂಘಕ್ಕೆ ನೀಡಬೇಕೆಂಬ ನಿಯಮವನ್ನು ಜಾರಿಗೆ ತರುತ್ತಿರುವುದಾಗಿ ತಿಳಿಸಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada