»   » ‘ಮಸಾಲ’ನಾಗಶೇಖರ್‌ ಚಿತ್ರದಲ್ಲಿ ಕಾಮಿಡಿ ಟೈಂ ಗಣೇಶ್‌!

‘ಮಸಾಲ’ನಾಗಶೇಖರ್‌ ಚಿತ್ರದಲ್ಲಿ ಕಾಮಿಡಿ ಟೈಂ ಗಣೇಶ್‌!

Posted By: Super
Subscribe to Filmibeat Kannada
Actor Nagashekhar
ರಾಧಿಕಾ ನಟನೆಯ 'ಮಸಾಲ" ಚಿತ್ರದಲ್ಲಿ ಗಲೀಜಾಗಿ ನಟಿಸಿದ್ದರೂ ನಾಗಶೇಖರ್‌ ಒಬ್ಬ ಕಲಾವಿದ ಅನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಸದ್ಯಕ್ಕೆ ಚಲಾವಣೆಯಲ್ಲಿರುವ ಈ ಹಾಸ್ಯ ನಟ, ನಿರ್ದೇಶಕ ಅನ್ನಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಕತೆ, ಚಿತ್ರಕತೆಯನ್ನು ಬರೆದು ಆ್ಯಕ್ಷನ್‌-ಕಟ್‌ ಹೇಳುವ ಅವರ ಬಹುದಿನದ ಹಂಬಲ, ನಿಜವಾಗುವ ದಿನಗಳು ಹತ್ತಿರದಲ್ಲಿಯೇ ಇವೆ. ನಾಗಶೇಖರ್‌ ಚಿತ್ರದಲ್ಲಿ ನಟಿಸಲು, ಸ್ಯಾಂಡಲ್‌ವುಡ್‌ನ ಸದ್ಯದ ಓಡುವ ಕುದುರೆ 'ಕಾಮಿಡಿ ಟೈಂ" ಗಣೇಶ್‌ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಚಿತ್ರದ ಕತೆ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿರುವ ನಾಗಶೇಖರ್‌, ಏನ್‌ ಬೇಕಾದರೂ ಕೇಳಿ, ಕತೆ ತಂಟೆಗೆ ಬರಬೇಡಿ ಎನ್ನುತ್ತಿದ್ದಾರೆ!

ಚಿತ್ರಕತೆ ಬರೆಯಲು ಸುಮಾರು 1ವರ್ಷ ತೆಗೆದುಕೊಂಡಿರುವ ನಾಗಶೇಖರ್‌, ಅತ್ಯಂತ ಶ್ರದ್ಧೆಯಿಂದ ಹೊಸ ಜವಾಬ್ದಾರಿ ನಿರ್ವಹಿಸಲು ಮಾಡಿರುವ ಹೋಮ್‌ವರ್ಕ್‌ ಕಡಿಮೆಯೇನಿಲ್ಲ. ಚೊಚ್ಚಲ ಚಿತ್ರಕ್ಕೆ ಚೆಂದದ ಹಾಡುಗಳನ್ನು ಮಾಡಲು ಬಯಸಿರುವ ಅವರು, ಚಿತ್ರದ ಸಂಗೀತಕ್ಕಾಗಿ ಇಳಯರಾಜರ ಬೆನ್ನು ಹತ್ತಿದ್ದಾರೆ. ನೇರವಾಗಿ ಈ ಬಗ್ಗೆ ಇಳಯರಾಜ ಜೊತೆ ಪುಟ್ಟ ಮಾತುಕತೆ ಸಹಾ ನಡೆಸಿದ್ದಾರೆ.

ಕೆ.ಮಂಜು ಸಿನಿಮಾ ನಿರ್ಮಾಣಕ್ಕೆ ಆಸಕ್ತಿವಹಿಸಿದ್ದು, ಎಲ್ಲವೂ ಸುಸೂತ್ರವಾದರೆ, ಹೊಸ ನಿರ್ದೇಶಕನ ಸ್ಥಾನವನ್ನು ನಾಗಶೇಖರ್‌ ಅಲಂಕರಿಸಲಿದ್ದಾರೆ.

English summary
Actor Nagashekhar who is planning to direct a new film for which he has written the story and the screenplay has now got a green signal from Ganesh, who is at present the current heartthrob of the Kannada film industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada