»   » ಅಶ್ವಥ್‌ಗೆ ‘ಶಾಂತವೇರಿ ಗೋಪಾಲಗೌಡ’ ಪ್ರಶಸ್ತಿ

ಅಶ್ವಥ್‌ಗೆ ‘ಶಾಂತವೇರಿ ಗೋಪಾಲಗೌಡ’ ಪ್ರಶಸ್ತಿ

Subscribe to Filmibeat Kannada

ಬೆಂಗಳೂರು : ಹಿರಿಯ ನಟ ಕೆ. ಎಸ್‌. ಅಶ್ವಥ್‌ ಅವರನ್ನು ಪ್ರಸಕ್ತ ಸಾಲಿನ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಪ್ರತಿವರ್ಷ ಕಲೆ ಮತ್ತು ಸಂಸ್ಕೃತಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಸಕ್ತ ವರ್ಷ ಅಶ್ವಥ್‌ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ-ನೆನಪಿನ ಕಾಣಿಕೆಯನ್ನು ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಒಳಗೊಂಡಿದೆ.

368ಚಿತ್ರಗಳಲ್ಲಿ ಅವಿಸ್ಮರಣೀಯ ಅಭಿನಯ ನೀಡಿರುವ ಅಶ್ವಥ್‌ ಈಗ ಚಿತ್ರರಂಗದಿಂದ ದೂರವುಳಿದು ವಿಶ್ರಾಂತಿ ಪಡೆಯುತ್ತಿದ್ದಾರೆ. ನಗರದ ಕನ್ನಡಭವನದಲ್ಲಿ ಏಪ್ರಿಲ್‌ 4ರಂದು ನಡೆಯಲಿರುವ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿಯನ್ನು ವಿತರಿಸಲಿದ್ದಾರೆ ಎಂದು ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada