»   » ಯಾರು? ಮುಂದೆ ಯಾರು? : ‘ರಶ್ಮಿ’ಯತ್ತ ಎಲ್ಲರ ಕಣ್ಣು!

ಯಾರು? ಮುಂದೆ ಯಾರು? : ‘ರಶ್ಮಿ’ಯತ್ತ ಎಲ್ಲರ ಕಣ್ಣು!

Posted By:
Subscribe to Filmibeat Kannada


ಕನ್ನಡದಲ್ಲಿ ಮೊದಲಿನಿಂದಲೂ ಇದ್ದದ್ದೇ ಮೂರು ಮುಕ್ಕಾಲು ನಾಯಕಿಯರು! ಶ್ರುತಿ, ಸುಧಾರಾಣಿ ನಂತರ ಬಂದ ‘ರ’ಕಾರ ನಾಯಕಿಯರ(ರಕ್ಷಿತಾ-ರಮ್ಯಾ-ರಾಧಿಕಾ) ದರ್ಬಾರು ಸದ್ಯಕ್ಕೆ ಮುಗಿದಿದೆ.

ರಕ್ಷಿತಾ, ಪ್ರೇಮ್‌ ತೆಕ್ಕೆಗೆ ಬಿದ್ದರು. ರಾಧಿಕಾ ಇನ್ನೆಲ್ಲೋ ಬಿದ್ದರು. ಅವರು ಮೇಲಕ್ಕೇಳುವ ಲಕ್ಷಣಗಳು ಅತಿ ಕಡಿಮೆ! ಏನೇನೋ ಮಾಡಲು ಹೋದ ರಾಧಿಕಾ, ಪೇಚಿಗೆ ಸಿಲುಕಿದ್ದಾರೆ. ಟ್ಯಾಬ್ಲಾಯ್ಡ್‌ಗಳ ತುಂಬ ರಾಧಿಕಾ ಲೀಲೆಗಳದೇ ಸುದ್ದಿ. ಮುಖಕ್ಕೆ ಬಿದ್ದ ಮಸಿ ತೊಳೆದುಕೊಳ್ಳಲು ಅವರಿಗೆ ಸಾಕಷ್ಟು ಸಮಯ ಬೇಕು! ಸ್ಯಾಂಡಲ್‌ವುಡ್‌ ಆಳುವ ಕನ್ನಡ ಹುಡುಗಿಯರು ಯಾರು? ಮುಂದ್ಯಾರು ಅನ್ನುವಾಗಲೇ, ಮಂಗಳೂರು ಮೂಲದ ರಶ್ಮೀ ‘ನಾನಿದ್ದೇನೆ’ ಎಂಬಂತೆ ಗಮನ ಸೆಳೆದಿದ್ದಾರೆ.

ಮೊದಲ ಚಿತ್ರ ‘ದುನಿಯಾ’ ಮೂಲಕವೇ ಸದ್ದು ಮಾಡಿದ ರಶ್ಮೀ, ಸದ್ಯಕ್ಕೀಗ ಗಾಂಧಿನಗರದ ಕಣ್ಮಣಿ. ಶೃತಿ ನಿರ್ಮಾಣದ ‘ಅಕ್ಕ ತಂಗಿ’ ಚಿತ್ರಕ್ಕೆ ಈಗಾಗಲೇ ರಶ್ಮೀ ಬುಕ್‌ ಆಗಿದ್ದಾರೆ. ‘ತುಂತುರು ಮಳೆ’ಯೂ ಅವರ ಪಾಲಾಗಿದೆ. ಈ ಸಿನಿಮಾದ ನಿರ್ದೇಶಕ ಮಹೇಶ್‌ ಸುಖಧರೆ, ರಶ್ಮೀ ಅಭಿನಯವನ್ನು ಗಂಟೆಗಟ್ಟಲೇ ಹೊಗಳಿದ್ದಾರೆ.

ಮತ್ತೊಂದು ಕಡೆ ‘ದುನಿಯಾ’ ನಾಯಕ ವಿಜಯ್‌ಗೂ ಒಳ್ಳೆಯ ಪಾತ್ರವೊಂದು ಸಿಕ್ಕಿದೆ. ಅದು ‘ಮುಸ್ಸಂಜೆಯ ಕಥಾ ಪ್ರಸಂಗ’. ಪಿ.ಲಂಕೇಶ್‌ ಬರೆದ ಈ ಚೆಂದದ ಕಾದಂಬರಿಯನ್ನು ಕವಿತಾ ಲಂಕೇಶ್‌ ಬೆಳ್ಳಿತೆರೆಗೆ ಅಳವಡಿಸುವ ಪ್ರಯತ್ನದಲ್ಲಿದ್ದಾರೆ. ಅದರಲ್ಲಿ ವಿಜಯ್‌ಗೆ ಮುಖ್ಯ ಪಾತ್ರವಿದೆಯಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada