»   » ಭಾರತೀಯ ಪ್ರೇಕ್ಷಕರನ್ನು ತಲುಪಲು ಚಾನೆಲ್‌ನ ಬದಲಾದ ನಿಲುವು

ಭಾರತೀಯ ಪ್ರೇಕ್ಷಕರನ್ನು ತಲುಪಲು ಚಾನೆಲ್‌ನ ಬದಲಾದ ನಿಲುವು

Posted By: Super
Subscribe to Filmibeat Kannada

ಬೆಂಗಳೂರು : ಭಾರತೀಯ ಪ್ರೇಕ್ಷಕ ವರ್ಗವನ್ನು ಆಕರ್ಷಿಸುವ ಸಲುವಾಗಿ ಡಿಸ್ಕವರಿ ಚಾನೆಲ್‌ ವಯಸ್ಕರಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ದೀಪಕ್‌ ಶೌರಿ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ನಾವು ಒಂದು ವಿವರಣಾತ್ಮಕ ಸಮೀಕ್ಷೆ ನಡೆಸಿದೆವು. ಭಾರತದ ಬಹುತೇಕ ಪ್ರೇಕ್ಷಕರು ಡಿಸ್ಕವರಿ ಚಾನೆಲ್‌ನಲ್ಲಿ ವನ್ಯ ಜೀವಿಗಳ ಸಾಕ್ಷ್ಯಚಿತ್ರಗಳನ್ನು ಮಾತ್ರ ತೋರಿಸುತ್ತಾರೆ ಎಂದು ತಪ್ಪಾಗಿ ತಿಳಿದಿದ್ದಾರೆ. ಈ ಕಾರಣಕ್ಕೇ ಹೆಚ್ಚು ಜನರನ್ನು ತಲುಪಲು ಮತ್ತು ಅವರ ನಿರೀಕ್ಷೆಗಳಿಗೆ ಸ್ಪಂದಿಸಲು ಮಧ್ಯರಾತ್ರಿಯಲ್ಲಿ ಡೆಸ್ಮಂಡ್‌ ಮಾರಿಸ್‌, ಮಾನವನಲ್ಲಿ ಲೈಂಗಿಕತೆ ಮೊದಲಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ನಿರ್ಧರಿಸಿದ್ದೇವೆ. ಇದರಿಂದ ನಮ್ಮ ಚಾನೆಲ್‌ ಬಗೆಗಿನ ಜನರ ದೃಷ್ಟಿಕೋನ ಬದಲಾಗಲಿದೆ ಎಂದು ಶೌರಿ ಹೇಳಿದರು.

ಡಿಸ್ಕವರಿ ಚಾನೆಲ್‌ನಲ್ಲಿ ಇಂಥಾ ಕಾರ್ಯಕ್ರಮ ಪ್ರಸಾರ ಮಾಡುವುದು ಸರಿಯೋ, ತಪ್ಪೋ? ನೀವೇ ಹೇಳಿ?

English summary
For adults only: Discovery turns spicy in India

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada