»   » ಮದುವೆಯ ನಂತರ ಕಮರ್ಷಿಯಲ್‌ ಚಿತ್ರಗಳ ನಟನೆಗೆ ವಿದಾಯ ?

ಮದುವೆಯ ನಂತರ ಕಮರ್ಷಿಯಲ್‌ ಚಿತ್ರಗಳ ನಟನೆಗೆ ವಿದಾಯ ?

Subscribe to Filmibeat Kannada

ದಕ್ಷಿಣ ಭಾರತದ ಜನಪ್ರಿಯ ನಟಿ ಹಾಗೂ ಸ್ವರ್ಣಕಮಲ ಪ್ರಶಸ್ತಿ ವಿಜೇತ ‘ದ್ವೀಪ’ ಸಿನಿಮಾದ ನಿರ್ಮಾಪಕಿ ಸೌಂದರ್ಯ ಅವರ ಮದುವೆ ಭಾನುವಾರ ನಡೆಯಿತು.

ಬೆಂಗಳೂರು ನಗರದ ಹೊಲವಲಯದಲ್ಲಿನ ರೆಸಾರ್ಟ್‌ ಒಂದರಲ್ಲಿ ಮದುವೆ ಸಾಂಪ್ರದಾಯಿಕವಾಗಿ ನಡೆಯಿತು. ಸಾಫ್ಟ್‌ವೇರ್‌ ಉದ್ಯಮಿ ರಘು ಎನ್ನುವವರನ್ನು ಮದುವೆಯಾಗುವ ಮೂಲಕ ಸೌಂದರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕುಟುಂಬ ವರ್ಗ ಹಾಗೂ ಆತ್ಮೀಯರಿಗಷ್ಟೇ ಮೀಸಲಾಗಿದ್ದ ಸೌಂದರ್ಯ ಅವರ ಮದುವೆಗೆ ಮಾಧ್ಯಮದವರಿಗೆ ಆಮಂತ್ರಣವಿರಲಿಲ್ಲ .

ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಸೌಂದರ್ಯ ಅಪಾರ ಜನಪ್ರಿಯತೆಯನ್ನು ಗಳಿಸಿರುವ ನಟಿ. ನೆರೆಯ ತೆಲುಗು ಚಿತ್ರರಂಗದಲ್ಲಂತೂ ಕೆಲವು ವರ್ಷಗಳ ಕಾಲ ಸೌಂದರ್ಯ ನಂ.1 ನಟಿ ಎನ್ನಿಸಿಕೊಂಡಿದ್ದರು.

(ಇನ್ಫೋ ವಾರ್ತೆ)

ಸೌಂದರ್ಯ ಲಹರಿ
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada