»   » ‘ಮಲ್ಲ’ನ ಗೆಟಪ್ಪಿನಲ್ಲಿ ಸೈಫ್‌

‘ಮಲ್ಲ’ನ ಗೆಟಪ್ಪಿನಲ್ಲಿ ಸೈಫ್‌

Posted By: Staff
Subscribe to Filmibeat Kannada

'ಮುಜ್‌ಸೆ ದೋಸ್ತಿ ಕರೋಗೆ" ಚಿತ್ರದ ನಿರ್ದೇಶಕ ಕುನಾಲ್‌ ಕೊಹ್ಲಿಯ ಹೊಸ ಚಿತ್ರ 'ಹಮ್‌ ತುಮ್‌". ಇದು ಭಾರತದ ಪ್ರತಿಷ್ಠಿತ ಪತ್ರಿಕೆಯಾಂದರ ವ್ಯಂಗ್ಯಚಿತ್ರಕಾರನ ಸುತ್ತ ಹೆಣೆದಿರುವ ಕಥೆ. ವ್ಯಂಗ್ಯ ಚಿತ್ರಕಾರ ಕರಣ್‌ ಕಪೂರ್‌ ಆಗಿ ಸೈಫ್‌ ಅಲಿ ಖಾನ್‌ ಕಾಣಿಸಲಿದ್ದಾರೆ. 'ದಿಲ್‌ ಚಾಹತಾ ಹೈ" ಚಿತ್ರದ ಮೂಲಕ ಡಿಫರೆಂಟ್‌ ಗೆಟಪ್ಪುಗಳಲ್ಲಿ ಕಾಣಿಸತೊಡಗಿರುವ ಸೈಫ್‌ ಈ ಬಾರಿ 'ಮಲ್ಲ"ನ ಗೆಟಪ್ಪಿಗೆ ಶರಣಾಗಿದ್ದಾರಂತೆ!

'ಮಲ್ಲ "ನಾಯಕಿಯಾಡನೆ 'ಮಾತಿಗಿಂತ ಮುತ್ತು ಉತ್ತಮ" ಎಂದು ಸಾರಿದರೆ, 'ಹಮ್‌ ತುಮ್‌" ಚಿತ್ರದಲ್ಲಿ ಉದ್ದ ಕೂದಲು ಬಿಟ್ಟುಕೊಂಡ ನಾಯಕ (ವ್ಯಂಗ್ಯಚಿತ್ರಕಾರ) ನಾಯಕಿ ರಿಯಾ(ರಾಣಿ ಮುಖರ್ಜಿ)ಗೆ ಕೊಡುವ ಒಂದು 'ಮುತ್ತಿ"ನಿಂದಲೇ ದೊಡ್ಡ ಅವಾಂತರ ಸೃಷ್ಠಿಸಿಕೊಂಡುಬಿಡುತ್ತಾನೆ. ಕೊನೆಗೂ ಹೇಗೋ ಒಪ್ಪಂದ ಮಾಡಿಕೊಂಡು ಇಬ್ಬರೂ ಒಂದಾಗಬೇಕೆನ್ನುವಷ್ಟರಲ್ಲಿ ಇನ್ನೊಂದು ಅವಾಂತರ!

ಯಶ್‌ ರಾಜ್‌ ನಿರ್ಮಾಣದ ಹಮ್‌ ತುಮ್‌ ಚಿತ್ರವು ಮೇ ತಿಂಗಳ 26 ರಂದು ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿನ ನಟ ಸೈಫ್‌ ಅಲಿ ಖಾನ್‌ನ 'ಮಲ್ಲ"ನ ಗೆಟಪ್ಪು ಗೆಲ್ಲಿಸುವುದೋ ಇಲ್ಲವೋ ಕಾದು ನೋಡಬೇಕು.

English summary
Saifali Khan wears Mallas getup in Hum Tum
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada