»   » ರೀಮೇಕ್‌ನಿಂದ ಭಾಷೆ-ಸಂಸ್ಕೃತಿಗೆ ಸಂಕಷ್ಟ -ನಾಗಾಭರಣ

ರೀಮೇಕ್‌ನಿಂದ ಭಾಷೆ-ಸಂಸ್ಕೃತಿಗೆ ಸಂಕಷ್ಟ -ನಾಗಾಭರಣ

Subscribe to Filmibeat Kannada


ಚಿಕ್ಕಮಗಳೂರು : ರೀಮೇಕ್‌ ಸಂಸ್ಕೃತಿ ಸೃಜನಶೀಲತೆಯನ್ನು ನಾಶಮಾಡುತ್ತಿದ್ದು, ಇದರಿಂದ ಭಾಷೆ ಮತ್ತು ಸಂಸ್ಕೃತಿಯ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.

ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ನಾನು ಯಾವತ್ತೂ ರೀಮೇಕ್‌ ಸಂಸ್ಕೃತಿಯನ್ನು ವಿರೋಧಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.

ವಿದ್ಯುನ್ಮಾನ ಮಾಧ್ಯಮ ನಮ್ಮ ಮನೆ ಮತ್ತು ಮನಸ್ಸನ್ನು ನಿಯಂತ್ರಿಸುತ್ತಿದೆ. ಅದಕ್ಕೆ ಮನಸ್ಸನ್ನು ಬದಲಿಸುವ ಶಕ್ತಿಯಿದೆ. ಅದು ಸಮಾಜದ ಆರೋಗ್ಯ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರಬೇಕು. ಚಲನಚಿತ್ರಗಳಲ್ಲಿ ಹಿಂಸೆಯನ್ನು ವೈಭವೀಕರಿಸಬಾರದು ಎಂದು ಅವರು ಇಂಗಿತ ವ್ಯಕ್ತಪಡಿಸಿದರು.

ಚಿತ್ರದ ಯಶಸ್ಸಿನಲ್ಲಿ ಪ್ರೇಕ್ಷಕರ ಪಾತ್ರ ಹಿರಿದು. ಒಳ್ಳೆಯ ಸೃಜನಶೀಲತೆ ಹಾಗೂ ಒಳ್ಳೆಯ ಸಂದೇಶವಿರುವ ಚಿತ್ರಗಳನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ಅವರು ವಿನಂತಿಸಿದರು.

(ದಟ್ಸ್‌ ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada