»   » ನಿರ್ದೇಶಕ ಮಣಿರತ್ನಂ ಸಹೋದರ ಜಿ. ಶ್ರೀನಿವಾಸನ್‌ ನಿಧನ

ನಿರ್ದೇಶಕ ಮಣಿರತ್ನಂ ಸಹೋದರ ಜಿ. ಶ್ರೀನಿವಾಸನ್‌ ನಿಧನ

Subscribe to Filmibeat Kannada


ಮನಾಲಿ : ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ಹೆಸರಾಂತ ನಿರ್ದೇಶಕ ಮಣಿರತ್ನಂ ಆವರ ಸೋದರ ಜಿ. ಶ್ರೀನಿವಾಸನ್‌ರವರು ಆಕಸ್ಮಿಕವಾಗಿ 50 ಅಡಿ ಆಳದ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಅವರ ಸಾವಿನಿಂದ ಮಣಿರತ್ನಂ ತತ್ತರಿಸಿದ್ದಾರೆ.

49 ವರ್ಷ ವಯಸ್ಸಿನ ಶ್ರೀನಿವಾಸನ್‌ರವರು ತಮ್ಮ ಕುಟುಂಬದ ಸಮೇತ ಮನಾಲಿಯಿಂದ 14 ಕಿ.ಮೀ ದೂರದ ಹಲನ್‌ನಲ್ಲಿ ಪರ್ವತಾರೋಹಣದಲ್ಲಿ ತೊಡಗಿದ್ದಾಗ, ಭಾನುವಾರ ಈ ದುರ್ಘಟನೆ ಸಂಭವಿಸಿದೆ.

ಎಂಜಿಆರ್‌- ಕರುಣಾನಿಧಿ ಹಾಗೂ ಜಯಲಲಿತಾ ನಡುವಿನ ಕಥೆಯುಳ್ಳ ಚಿತ್ರ- ಇರುವರ್‌(1997), ಯುವಕರನ್ನು ರಾಜಕೀಯಕ್ಕೆ ಸೆಳೆಯುವ ಚಿತ್ರ- ಯುವ(2002), ಶ್ರೀಲಂಕಾ ಬಂಡುಕೋರರಿಂದ ದೂರಾದ ಮಗುವಿನ ಕಥೆಯುಳ್ಳ ಕಣ್ಣತ್ತೆೈ ಮುಟ್ಟ ಮಿತ್ತಾಲ್‌(2002) ಹಾಗೂ ರಿಲೆಯನ್ಸ್‌ ಸ್ಥಾಪಕ ಧೀರುಭಾಯಿ ಅಂಬಾನಿ ಜೀವನಗಾಥೆಯ ಗುರು ಚಿತ್ರ ಸೇರಿದಂತೆ ತಮ್ಮ ಮದ್ರಾಸ್‌ ಟಾಕೀಸ್‌ ಸಂಸ್ಥೆ ಮೂಲಕ ಸದಭಿರುಚಿಯ ಚಿತ್ರಗಳನ್ನು ತೆರೆಗೆ ನೀಡಿದ್ದಾರೆ.

ಶ್ರೀನಿವಾಸನ್‌ರವರು ನಿರ್ದೇಶಕ ಮಣಿರತ್ನಂರ ಎಲ್ಲಾ ಬಗೆಯ ನೋವು-ನಲಿವಿನ ಸಂದರ್ಭಗಳಲ್ಲಿ ಭಾಗಿಯಾಗಿ, ಬೆಂಗಾವಲಾಗಿ ಇರುತ್ತಿದ್ದರು.

ಮೃತರು ಪತ್ನಿ ಸಂಧ್ಯಾ ಲಕ್ಷ್ಮಣ್‌ ಸೇರಿದಂತೆ ದಿವ್ಯಾ, ಅಕ್ಷಯ ಹಾಗೂ ಶ್ರೇಯಾ ಎಂಬ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಚೆನ್ನೈನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ಹೇಳಿವೆ.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada