»   » ಮತ್ತೆ ಶಸ್ತ್ರ ಚಿಕಿತ್ಸೆಗೊಳಗಾದ ಡಾ.ರಾಜ್‌

ಮತ್ತೆ ಶಸ್ತ್ರ ಚಿಕಿತ್ಸೆಗೊಳಗಾದ ಡಾ.ರಾಜ್‌

Posted By: Staff
Subscribe to Filmibeat Kannada

ಬೆಂಗಳೂರು : ನಡೆದಾಡುವಲ್ಲಿ ತೊಂದರೆ ಅನುಭವಿಸುತ್ತಿದ್ದ ವರನಟ ಡಾ.ರಾಜ್‌ಕುಮಾರ್‌ ಸೋಮವಾರ (ಜೂ.28) ಶಸ್ತ್ರ ಚಿಕಿತ್ಸೆಗೆ ಒಳಗಾದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು , ರಾಜ್‌ ಆರೋಗ್ಯ ಚೆನ್ನಾಗಿದೆ.

ವರ್ಷದ ಹಿಂದೆ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಜ್‌ ಅವರು ನೋವಿನಿಂದ ಸಂಪೂರ್ಣ ಮುಕ್ತರಾಗಿರಲಿಲ್ಲ . ನಡೆದಾಡುವಲ್ಲಿ ತೊಂದರೆ ಅನುಭವಿಸುತ್ತಿದ್ದರು. ಆ ಕಾರಣದಿಂದಾಗಿ ಈ ಮುನ್ನಿನ ಮಂಡಿ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅಳವಡಿಸಲಾಗಿದ್ದ ವೈರ್‌(wires)ಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದುಹಾಕಲಾಯಿತು. ಇದೊಂದು ಚಿಕ್ಕ ಶಸ್ತ್ರ ಚಿಕಿತ್ಸೆ ಎಂದು ರಾಜ್‌ ಖಾಸಗಿ ವೈದ್ಯರು ತಿಳಿಸಿದ್ದಾರೆ.

ಬೆಂಗಳೂರಿನ ಹಾಸ್ಮಟ್‌ ಮೂಳೆ ಹಾಗೂ ಕೀಲು ಆಸ್ಪತ್ರೆಯಲ್ಲಿ ರಾಜ್‌ ಶಸ್ತ್ರಚಿಕಿತ್ಸೆ ಸೋಮವಾರ ನಡೆಯಿತು. ಸುಮಾರು 30 ನಿಮಿಷಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಸಡಿಲಗೊಂಡಿದ್ದ ವೈರ್‌ಗಳನ್ನು ಯಶಸ್ವಿಯಾಗಿ ತೆಗೆದು ಹಾಕಲಾಯಿತು. ರಾಜ್‌ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದರು.

English summary
Kannada thespian Rajkumar today (June 28, 2004) underwent a minor surgery to remove wires placed during a hiprelated surgery a year ago that were troubling him while walking
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada