»   » ಸಕತ್ತು ಹಾಟ್ ಮಗಾ!!!!ಗೆಳೆಯನಿಗಾಗಿ ಐಟಂ ಗರ್ಲ್ ರಾಖಿ ಸಾವಂತ್ ಥಕಧಿಮಿತಾ!

ಸಕತ್ತು ಹಾಟ್ ಮಗಾ!!!!ಗೆಳೆಯನಿಗಾಗಿ ಐಟಂ ಗರ್ಲ್ ರಾಖಿ ಸಾವಂತ್ ಥಕಧಿಮಿತಾ!

Subscribe to Filmibeat Kannada


ಸಿನಿಮಾಕ್ಕೆ ಬಂದವಳು ಟೀವಿ ಸೀರಿಯಲ್‌ಗೆ ಬರೋದಿಲ್ವೇ? ಎಂಬಂತೆ, ಬಾಲಿವುಡ್‌ಗೆ ಬಂದವಳು, ಸ್ಯಾಂಡಲ್‌ವುಡ್‌ಗೆ ಬರೋದಿಲ್ವೇ? ಅನ್ನಬಹುದು! ಬಾಲಿವುಡ್‌ ಬಿಚ್ಚಮ್ಮಗಳೆಲ್ಲ ಸ್ಯಾಂಡಲ್‌ವುಡ್‌ಗೆ ನುಗ್ಗುತ್ತಿದ್ದಾರೆ. ಈಗಿನ ಸರದಿ ರಾಖಿ ಸಾವಂತ್!

ಭಾಷೆ ಯಾವುದಾದರೇನು, ಕುಣಿತ ಒಂದೇ ಅಲ್ವೇ.. ಈ ಐಟಂ ಬಾಲೆಯರು ರಾಷ್ಟ್ರೀಯ ಭಾವೈಕ್ಯತೆಯ ಪಾಠ ಹೇಳಲು ಹೊರಟಿದ್ದಾರೆ! ಕಾಸಿಗೆ ತಕ್ಕ ಕಚ್ಚಾಯ ಕೊಡಲು ಇವರೆಲ್ಲರೂ ರೆಡಿ. ಬಾಲಿವುಡ್‌ನ ಐಟಂ ಹುಡುಗಿಯರು ಕನ್ನಡಕ್ಕೆ ಬರುತ್ತಿರುವುದು ಹೊಸತೇನಲ್ಲ.

ಈ ಹಿಂದೆ ಜೋಗಿ ಚಿತ್ರಕ್ಕಾಗಿ ಯಾನಾ ಗುಪ್ತಾ, ಪ್ರೀತಿ ಏಕೆ ಭೂಮಿ ಮೇಲಿದೆ? ಚಿತ್ರಕ್ಕಾಗಿ ಮಲ್ಲಿಕಾ ಶೆರಾವತ್, ಒರಟ ಐ ಲವ್ ಯು ಚಿತ್ರಕ್ಕಾಗಿ ಮುಮೈತ್ ಖಾನ್ ಬಂದದ್ದು, ಹೋದದ್ದನ್ನು ಯಾರು ತಾನೇ ಮರೆಯುತ್ತಾರೆ!

ಈಗ ಗೆಳೆಯ ಚಿತ್ರದಲ್ಲಿ ಕುಣಿಯಲು ಬಾಲಿವುಡ್ ಐಟಂ ಗರ್ಲ್ ರಾಖಿ ಸಾವಂತ್ ರೆಡಿ. ಈ ಕುಣಿತಕ್ಕೆ ರಮ್ಯಾ ಹೆಸರು ಹಿಂದೆ ಕೇಳಿಬಂದಿತ್ತು. ರಮ್ಯಾ ಒಪ್ಪಲಿಲ್ಲವೋ? ನಿರ್ದೇಶಕರೇ ಒಪ್ಪಲಿಲ್ವೋ? ರಮ್ಯಾ ಜಾಗಕ್ಕೆ ರಾಖಿ ಬಂದಿದ್ದಾಳೆ. ಒಂದೇ ಒಂದು ಹಾಡಿಗೆ 15ಲಕ್ಷವನ್ನು ಡಿಮ್ಯಾಂಡ್ ಮಾಡಿದ್ದಾಳೆ.

ಜೂ.30ರಿಂದ ರಾಕ್‌ಲೈನ್‌ ಸ್ಟುಡಿಯೋದಲ್ಲಿ ಚಿತ್ರೀಕರಣ ಶುರು. ರಾಖಿ ದಂತದ ಮೈ ಮೇಲೆ ಕ್ಯಾಮೆರಾ ಬೆಳಕು ಹರಿಸಲು, ಮಾಧ್ಯಮಗಳ ಛಾಯಾಗ್ರಾಹಕರೂ ರೆಡಿ!

ಸಿಕ್ಸರ್ ಖ್ಯಾತಿಯ ದೇವರಾಜ್ ಪುತ್ರ ಪ್ರಜ್ವಲ್ ಚಿತ್ರದ ನಾಯಕ. ತರುಣ್‌ಗೆ ಚಿತ್ರದಲ್ಲೊಂದು ಮುಖ್ಯ ಪಾತ್ರ. ಹರ್ಷ ನಿರ್ದೇಶನದ ಗೆಳೆಯ ಚಿತ್ರದಲ್ಲಿ ದುನಿಯ ವಿಜಯ್ ಸಹಾ ಇದ್ದಾರೆ. ಅವರಿಗೆ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ. ಇದು ಪ್ರಕಾಶ್ ರೈ ಮಾಡಬೇಕಾಗಿದ್ದ ಪಾತ್ರ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada