For Quick Alerts
  ALLOW NOTIFICATIONS  
  For Daily Alerts

  ಗಂಗರಾಜು ನಿದ್ದೆ ಕೆಡಿಸಿರುವ ಶಿವಾಜಿ ನಕಲಿ ಸಿ.ಡಿ. ದಂಧೆ

  By Staff
  |

  ಬೆಂಗಳೂರು : ಪೈರಸಿ ಬಗ್ಗೆ ಗಾಂಧಿನಗರದಲ್ಲಿ ಮತ್ತೆ ಮಾತು ಕೇಳಿಬರುತ್ತಿದೆ. ಈ ಮಾತಿಗೆ ದಾರಿ ಮಾಡಿರುವುದು ರಜನೀಕಾಂತ್ ಅಭಿನಯದತಮಿಳಿನ ಶಿವಾಜಿ ಚಿತ್ರ. ಈ ಚಿತ್ರದ ನಕಲಿ ಸಿ.ಡಿ ಮಾರಾಟ ಕಂಡು, ಕರ್ನಾಟಕದ ವಿತರಕ ಹೆಚ್.ಡಿ.ಗಂಗರಾಜು ಕಂಗೆಟ್ಟಿದ್ದಾರೆ.

  ಕೋಟ್ಯಂತರ ಹಣ ಸುರಿದು, ಹಕ್ಕುಗಳನ್ನು ಖರೀದಿಸಿದ್ದೇನೆ. ನಕಲಿ ಸಿ.ಡಿ ಗಳಿಂದ ಸಂಕಷ್ಟಕ್ಕೆ ಸಿಲುಕಿದ್ದೇನೆ ಎಂಬುದು ಅವರ ನೋವು. ಈ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.

  ಭೂಗತ ಗ್ಯಾಂಗುಗಳು ವ್ಯವಸ್ಥಿತವಾಗಿ ಎಲ್ಲ ಭಾಷೆಗಳ ಚಲನಚಿತ್ರಗಳನ್ನು ನಕಲು ಮಾಡುತ್ತಿವೆ ಎಂದು ಆರೋಪಿಸಿದ ಗಂಗರಾಜು, ಇಂತಹ ಚಟುವಟಿಕೆಗಳಲ್ಲಿ ತೊಡಗುವವರನ್ನು ಬಂಧಿಸಲು ಸರ್ಕಾರ ಗೂಂಡಾ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಪಡಿಸಿದರು.

  ಈ ಕಾಯ್ದೆ ಈಗಾಗಲೇ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆದರೆ ರಾಜ್ಯದಲ್ಲಿನ್ನೂ ಅಧಿಸೂಚನೆ ಹೊರಡಿಸಬೇಕಿದೆ ಎಂದು ಅವರು ಹೇಳಿದರು.

  ಶಿವಾಜಿ ಚಿತ್ರಪ್ರದರ್ಶನ ಹೇಗೆ ನಡೆದಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರೇಕ್ಷಕರು ಚಿತ್ರವನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಈ ಬೆಳವಣಿಗೆ ಗಮನಿಸಿದರೆ, ಚಿತ್ರ ಹಣಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಮಾಡಲಿದೆ ಎನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

  (ದಟ್ಸ್ ಕನ್ನಡ ವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X