»   » ಹಳ್ಳಿ ಪದಗಳೊಂದಿಗೆ ನಂಜುಂಡಿ ಬಂದಾನು..

ಹಳ್ಳಿ ಪದಗಳೊಂದಿಗೆ ನಂಜುಂಡಿ ಬಂದಾನು..

Subscribe to Filmibeat Kannada

ಕೋಟಿ ನಿರ್ಮಾಪಕ ಎಂದೇ ಪ್ರಸಿದ್ಧರಾದ ರಾಮು ನಿರ್ಮಾಣದ ಮಹತ್ವಾಕಾಂಕ್ಷೆಯ ‘ನಂಜುಂಡಿ’ ತೆರೆ ಕಾಣಲು ಸಿದ್ಧತೆ ನಡೆಸಿದೆ. ‘ನಂಜುಂಡಿ’ ಚಿತ್ರದ ಪ್ರಥಮ ಪ್ರತಿ ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ನೀಡಿದೆ.

ಬಿಡುಗಡೆಗೆ ಮುನ್ನವೇ ಅನೇಕ ಕಾರಣಗಳಿಂದ ಪ್ರೇಕ್ಷಕ ವಲಯ ಹಾಗೂ ಗಾಂಧಿನಗರದಲ್ಲಿ ‘ನಂಜುಂಡಿ’ ನಿರೀಕ್ಷೆ ಹುಟ್ಟಿಸಿದೆ. ಸಂಗೀತ ನಿರ್ದೇಶಕ ಹಂಸಲೇಖಾ ಅವರ ಸಂಗೀತ ನಿರ್ದೇಶನದ 250 ನೇ ಚಿತ್ರ ಎನ್ನುವ ವಿಶೇಷಣ ‘ನಂಜುಂಡಿ’ ಚಿತ್ರಕ್ಕಿದ್ದು , ಶಿವರಾಜ್‌ಕುಮಾರ್‌ ಅಭಿನಯದ ಶ್ರೀರಕ್ಷೆಯೂ ಇದೆ.

ಹಂಸಲೇಖಾ ಅವರ ಸಾಹಿತ್ಯ ಹಾಗೂ ಸಂಗೀತ ಅತ್ಯುತ್ತಮವಾಗಿದೆ ಎಂದು ಗಾಂಧೀನಗರ ಈಗಾಗಲೇ ಶಹಬ್ಭಾಸ್‌ಗಿರಿ ಕೊಟ್ಟಿದೆ. ಬ್ರೇಕ್‌ಗಾಗಿ ಕಾಯುತ್ತಿರುವ ಹಂಸಲೇಖಾ ತುಂಬಾ ದಿನಗಳ ನಂತರ ಲೈವ್‌ ಆರ್ಕೆಸ್ಟ್ರಾ ಬಳಸಿ ಉತ್ತಮ ಸಂಗೀತ ಕೊಟ್ಟಿದ್ದಾರೆ. ಹಳ್ಳಿ ಪದಗಳ ಸುಗ್ಗಿಗೆ ಪ್ರೇಕ್ಷಕರು ತಲೆದೂಗಿರುವ ಸುದ್ದಿಯೂ ಕ್ಯಾಸೆಟ್‌ ಮಾರುಕಟ್ಟೆಯಿಂದ ಬಂದಿದೆ.

ಶಿವರಾಜ್‌ಕುಮಾರ್‌ ಜೊತೆಗೆ ಬಾಂಬೆ ಹುಡುಗಿ ಡೆಬಿನಾ ನಾಯಕಿಯಾಗಿ ನಟಿಸಿದ್ದಾಳೆ. ಲೋಕೇಶ್‌, ಸುರೇಶ್‌ ಹೆಬ್ಳೀಕರ್‌, ಉಮಾಶ್ರೀ, ಶ್ರೀನಿವಾಸ ಪ್ರಭು, ದೊಡ್ಡಣ್ಣ , ಇತರರು ತಾರಾಗಣದಲ್ಲಿದ್ದಾರೆ. ಹಿರಿಯ ನಟ ಎಂ.ಪಿ. ಶಂಕರ್‌ ಗೌರವ ಕಲಾವಿದರಾಗಿ ನಟಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಎಸ್‌.ಆರ್‌.ಬ್ರದರ್ಸ್‌ ಅವರದ್ದು .

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada