»   » ಓಹೋಓಹೋ ನಗ್ಮಾ ಮದುವೆಯಂತೆ!

ಓಹೋಓಹೋ ನಗ್ಮಾ ಮದುವೆಯಂತೆ!

Subscribe to Filmibeat Kannada

ಮದುವೆಯಾಗಲು ನಗ್ಮಾ ತಯಾರಾಗಿದ್ದಾರೆ.. ಅಂದರೆ ; ‘ಅವರು ಇಷ್ಟು ದಿನ ಮದುವೆಯಾಗಿರಲಿಲ್ವಾ?’ ಎಂದು ಕೆಲವರು ತಮ್ಮ ಹುಬ್ಬು ಮೇಲಕ್ಕೇರಿಸಬಹುದು(ಹುಬ್ಬು ಇರೋದೇ ಮೇಲಕ್ಕೇರಿಸೋಕೆ ಬಿಡಿ!).

ನಗ್ಮಾ ಜೊತೆಗೆ ಸುಮಾರು ಹತ್ತು ಚಿತ್ರಗಳಲ್ಲಿ ನಟಿಸಿರುವ, ‘ಭೋಜ್‌ಪುರಿ’ ಭಾಷಾ ಚಿತ್ರಗಳ ನಟ ‘ರವಿ ಕಿಶನ್‌’ ಮದುವೆ ಗಂಡು. ಆದರೆ ದುಃಖದ ಸಂಗತಿ ಏನೆಂದರೆ, ರವಿ ಕಿಶನ್‌ಗೆ ಈಗಾಗಲೇ ಮದುವೆಯಾಗಿದೆ. ಅವರು ಮೂವರು ಹೆಣ್ಣುಮಕ್ಕಳ ತಂದೆ!

ಈ ಮೊದಲು ತಮಿಳು ನಟ ‘ಶರತ್‌ಕುಮಾರ್‌’ ಜೊತೆ ನಗ್ಮಾ ಹೆಸರು ತಳಕು ಹಾಕಿಕೊಂಡಿತ್ತು. ಇದು ಕಾಲಿವುಡ್‌(ತಮಿಳು ಚಿತ್ರರಂಗ)ನ ಹಳೆಯ ಸುದ್ದಿ. ಆನಂತರ ಬಾಲಿವುಡ್‌ ನಟ ‘ಸಲ್ಮಾನ್‌ಖಾನ್‌’ ಜೊತೆಯೂ, ಗಾಸಿಪ್‌ ಗುಸುಗುಸು ಕೇಳಿ ಬಂದಿತ್ತು. ಆದರೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ‘ಸೌರವ್‌ ಗಂಗೂಲಿ’ ಜೊತೆಗಿನ ನಗ್ಮಾ ಸರಸಕ್ಕೆ ಮಾತ್ರ ರೋಚಕ ಪ್ರಚಾರ ಸಿಕ್ಕಿತ್ತು. ಇನ್ನೇನು ಇಬ್ಬರೂ ಮದುವೆ ಆಗಿಯೇಬಿಟ್ಟರು ಎನ್ನುವಷ್ಟರ ಮಟ್ಟಿಗೆ ಅದು ಹರಡಿತ್ತು.

ಇವರೆಲ್ಲರ ನಂತರ ನಗ್ಮಾ ಹೆಸರು ಭೋಜ್‌ಪುರಿ ನಟ ರವಿ ಕಿಶನ್‌ ಜೊತೆ ಸುತ್ತಿಕೊಂಡಿದೆ. ಈ ಮಧ್ಯೆ ನಗ್ಮಾಳನ್ನು ಮದುವೆಯಾಗುವುದಾಗಿ ರವಿ ಕಿಶನ್‌ ಘೋಷಿಸಿದ್ದಾರೆ. ಸುದ್ದಿಯ ಸತ್ಯಾಸತ್ಯತೆ ಕುರಿತು ನಗ್ಮಾಳನ್ನು ಕೇಳಿದಾಗ, ‘ನಾನೀಗ ಚಿತ್ರೀಕರಣದಲ್ಲಿದ್ದೇನೆ. ಹಾಗಾಗಿ ಅಂತಹ ವಿಚಾರಗಳ ಬಗ್ಗೆ ಮಾತನಾಡಲಾರೆ. ಆದರೆ ಆಗಸ್ಟ್‌ 5ರಂದು ಮುಂಬಯಿಗೆ ಮರಳಿದಾಗ ನನ್ನನ್ನು ಕೇಳಿ, ಆಗ ಹೇಳುತ್ತೇನೆ.’ ಎಂದಿದ್ದಾಳೆ. ನಗ್ಮಾಳ ಈ ಹೇಳಿಕೆ ರವಿ ಕಿಶನ್‌ ಸತ್ಯವನ್ನೇ ಹೇಳಿದ್ದಾರೆ ಎಂಬುದಕ್ಕೆ ಪುರಾವೆ ಒಂದಗಿಸುವಂತಿದೆ.

ನಗ್ಮಾಳ ತಂಗಿ ‘ಜ್ಯೋತಿಕಾ’ ಶೀಘ್ರದಲ್ಲೇ ಮದುವೆಯಾಲಿರುವ ಕಾರಣ, ನಗ್ಮಾ ಕೂಡ ಮದುವೆಯಾಗಲು ನಿರ್ಧರಿಸಿದ್ದಾರೆ. ಮದುವೆ ನಂತರ ನಗ್ಮಾ ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆ ಎಂದು ಮಾತೂ ಕೇಳಿಬಂದಿದೆ.

ರವಿಚಂದ್ರನ್‌, ಶಿವರಾಜ್‌ಕುಮಾರ್‌ ಮತ್ತಿತರ ನಾಯಕರಿಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡಿದ್ದ ‘ನಗ್ಮಾ’, ಒಂದು ಕಾಲದಲ್ಲಿ ತಮಿಳು ಚಿತ್ರರಂಗವನ್ನಾಳಿದ ನಟಿ. ಹೊಸಮುಖಗಳು ತಮಿಳು ಚಿತ್ರರಂಗದತ್ತ ಬರುತ್ತಲೇ ಆಕೆಗೆ ಅವಕಾಶಗಳೂ ಕಡಿಮೆಯಾಗುತ್ತಾ ಬಂದವು. ಹಾಗಾಗಿ ಆಕೆ ಬಾಲಿವುಡ್‌ನತ್ತ ದೃಷ್ಟಿ ನೆಟ್ಟಿದ್ದು ಸಹಜವೇ ಆಗಿತ್ತು. ಆದರೆ ಅಲ್ಲಿಯೂ ಅವಕಾಶಗಳ ಕೊರತೆ ಮುಂದುವರಿಯಿತು. ಸಿನಿಮಾಗಳ ಮೂಲಕ ಸುದ್ದಿ ಮಾಡಲು ಸೋತ ನಗ್ಮಾ, ಮದುವೆ ಮೂಲಕ ಸುದ್ದಿ ಮಾಡುತ್ತಿದ್ದಾರೆ!

ನಗ್ಮಾಗೆ ಮಗಳಿದ್ದಾಳಾ? : ನಗ್ಮಾಗೆ ಈಗಾಗಲೇ ಸುಮಾರು 15 ವರ್ಷದ ಮಗಳಿದ್ದಾಳೆ. ಆಕೆ ತಂದೆಯಾರೆಂಬುದು ನಗ್ಮಾಗೆ ಮಾತ್ರ ಗೊತ್ತು. ಈ ಮಗು ಜನಿಸಿದ ನಂತರವೇ ಆಕೆ, ಹಿಂದಿ ಚಿತ್ರರಂಗದ ಹಿರಿಯ ತಾರೆ ಪೃಥ್ವಿ ರಾಜ್‌ಕಪೂರ್‌(ರಾಜ್‌ ಕಪೂರ್‌ ತಂದೆ) ಕುಟುಂಬದ ಕುಡಿ ಚಿಂಪೂ ಕಪೂರ್‌ನೊಂದಿಗೆ ಲಲ್ಲೆಗರೆಯುತ್ತಿದ್ದರು ಎಂಬುದು ಮತ್ತೊಂದು ಹಳೆಯ ಗಾಸಿಪ್‌.

ಚಿಂಪೂ ನಗ್ಮಾಳನ್ನು ಮದುವೆಯಾಗಲು ಇಚ್ಛಿಸಿದ್ದರು. ಆದರೆ ಕಪೂರ್‌ ಕುಟುಂಬದಲ್ಲಿ ವಿರೋಧ ವ್ಯಕ್ತವಾದ ಕಾರಣ, ಇದು ಸಾಧ್ಯವಾಗಲಿಲ್ಲ ಎಂಬ ಸುದ್ದಿ ಈ ಹಿಂದೆ ಚಲಾವಣೆಯಲ್ಲಿತ್ತು.

Post your views

ಮದುವೆ ಸುಗ್ಗಿ
ಪ್ರೇಮಾ, ಉಮಾಮಹೇಶ್ವರಿ, ರಕ್ಷಿತಾ


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada