»   » ಡ್ರೈವಿಂಗ್ ಬಾರದ ರೇಖಾಯಿಂದ ಮಾಂಸಪ್ರಿಯ ದರ್ಶನ್ ವರೆಗೆ

ಡ್ರೈವಿಂಗ್ ಬಾರದ ರೇಖಾಯಿಂದ ಮಾಂಸಪ್ರಿಯ ದರ್ಶನ್ ವರೆಗೆ

Posted By:
Subscribe to Filmibeat Kannada


ಸ್ಯಾಂಡಲ್ ವುಡ್ ನ ಬಿಸಿಬಿಸಿ, ಗರಿಗರಿ, ಪುಡಿಪುಡಿ ಸುದ್ದಿಗಳು..

ಜಿಂಕೆ ಮರಿ ರೇಖಾಗೆ, ಇತ್ತೀಚೆಗೆ ಅವಕಾಶಗಳು ಹೆಚ್ಚುತ್ತಿವೆ. ಹುಡುಗಾಟ ನಂತರ ಗುಣವಂತ, ಹೆತ್ತರೇ ಹೆಣ್ಣನ್ನೇ ಹೆರಬೇಕು ಮತ್ತಿತರ ಚಿತ್ರಗಳಲ್ಲಿ ರೇಖಾ ನಾಯಕಿ. ಅಭಿನಯದಲ್ಲೇ ರೇಖಾ ಹೇಗೆ? ಈ ಪ್ರಶ್ನೆಗೆ ಉತ್ತರ ಪ್ರೇಕ್ಷಕರಿಗೆ ಗೊತ್ತಿದೆ. ಪ್ರೇಕ್ಷಕರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ;ರೇಖಾಗೆ ಸ್ಕೂಟಿ ಸೇರಿದಂತೆ ಯಾವುದೇ ದ್ವಿಚಕ್ರ ವಾಹನ ಓಡಿಸಲು ಬರುವುದಿಲ್ಲ! ಈ ವಿಷಯ ಗೊತ್ತಿಲ್ಲದ ನಿರ್ದೇಶಕರು ಚಿತ್ರೀಕರಣದ ಸಂದರ್ಭದಲ್ಲಿ ತಲೆಚಚ್ಚಿಕೊಂಡರಂತೆ!

***

ದರ್ಶನ್ ಮಾಜಿ ಮದ್ಯಪಾನಿಯಂತೆ. ಆದರೆ ಕೆಲವು ಸಲ ಫಾರಿನ್ ವೈನ್ ರುಚಿ ನೋಡುತ್ತಾರಂತೆ! ದರ್ಶನ್ ಪ್ರಾಣಿ ಪ್ರಿಯ. ಮೈಸೂರಿನ ಅವರ ಮನೆಯಲ್ಲಿ ಒಂಟೆ ಇದೆಯಂತೆ.ಬಣ್ಣದ ಪಕ್ಷಿಗಳಿವೆಯಂತೆ.

ದರ್ಶನ್ ಮಾಂಸ ಪ್ರಿಯ. ದಿನದ 3ಹೊತ್ತು ಮಾಂಸ ಕೊಟ್ಟರೂ ಅವರಿಗೆ ಬೇಸರವಿಲ್ಲವಂತೆ! ಚಿಕನ್ ಕಬಾಬ್ ಹೆಸರು ಕೇಳಿದರೆ ಸಾಕು, ಅವರ ಬಾಯಲ್ಲಿ ನೀರು ಬರುತ್ತೆ!

***

ಕೊನೆಗೂ ಜಂಭದ ಹುಡುಗಿಚಿತ್ರಮಂದಿರಕ್ಕೆ ಮರಳಿದೆ. ನನ್ನ ಚಿತ್ರ ಚೆನ್ನಾಗಿದ್ದರೂ, ಪ್ರೇಕ್ಷಕರು ಒಪ್ಪಿಕೊಂಡಿದ್ದರೂ ಚಿತ್ರಮಂದಿರ ನೀಡುತ್ತಿಲ್ಲ. ನನಗಂತೂ ಅಳುವೇ ಬರುತ್ತಿದೆ ಎಂದು ಪತ್ರಕರ್ತರ ಮುಂದೆ ನಾಯಕಿ,ನಿರ್ದೇಶಕಿ ಮತ್ತು ನಿರ್ಮಾಪಕಿ ಪ್ರಿಯಾ ಹಾಸನ್ ಗೋಳಾಡಿದ್ದರು. ಈಗ ಹೇಗೋ ಸಪ್ನ ಚಿತ್ರಮಂದಿರಕ್ಕೆ ಜಂಭದ ಹುಡುಗಿಬಂದಿದೆ.

***

ಗಣೇಶ್ ಮತ್ತು ರೇಖಾ ಅಭಿನಯದಹುಡುಗಾಟಐವತ್ತು ದಿನ ಪೂರೈಸಿದೆ. ಇತ್ತ ಗಣೇಶ್ ರ ಇನ್ನೊಂದು ಚಿತ್ರ ಚೆಲುವಿನ ಚಿತ್ತಾರಅರ್ಧ ಸೆಂಚುರಿಯ ಸಮೀಪದಲ್ಲಿದೆ.

***

ರಾಜ್ಯ ಸರ್ಕಾರದ ಐದು ಪ್ರಶಸ್ತಿ ಬಾಚಿಕೊಂಡ ದುನಿಯಾ23ನೇ ವಾರ. ಮತ್ತೊಂದು ಕಡೆ ಏಳು ಪ್ರಶಸ್ತಿ ಬಾಚಿಕೊಂಡ ಮುಂಗಾರು ಮಳೆ ಚಿತ್ರ 31 ವಾರ ಪೂರೈಸಿದೆ. ಈ ಎರಡೂ ಚಿತ್ರಗಳು ಚಿತ್ರಮಂದಿರಗಳಿಗೆ ಕಚ್ಚಿಕೊಂಡಿರುವ ಕಾರಣ, ಬೇರೆ ಕನ್ನಡ ಚಿತ್ರಗಳು ಬಿಡುಗಡೆಗೆ ಪರದಾಡುತ್ತಿವೆ.

***

ಮನ್ಮಥಚಿತ್ರದಲ್ಲಿ ಸೋಡಾ ಗ್ಲಾಸ್ ಹಾಕಿಕೊಂಡು, ಗೂನು ಬೆನ್ನಿನವನಂತೆ ಬಗ್ಗಿಬಗ್ಗಿ ಜಗ್ಗೇಶ್ ಸುಸ್ತಾಗಿದ್ದಾರೆ.ಅನಾರೋಗ್ಯದಿಂದ ಅವರು ಬಳಲಿದ್ದಾರೆ. ಅವರು ಇಷ್ಟೆಲ್ಲ ಕಷ್ಟಪಟ್ಟ ಈ ಚಿತ್ರ ಆಗಸ್ಟ್ 3ರಂದು ತೆರೆಕಾಣಲಿದೆ.

***

ದರ್ಶನ್ ಮತ್ತು ಆದಿತ್ಯ, ಈ ಇಬ್ಬರು ಹೀರೋಗಳಿದ್ದರೂ ಸ್ನೇಹನಾ ಪ್ರೀತಿನಾಚಿತ್ರ ಕುಂಟುತ್ತಿದೆ.ಈ ಮಧ್ಯೆ ಮಚ್ಚಿನ ಚಿತ್ರಕ್ಕೆ ದರ್ಶನ್ ಮರಳಿದ್ದು, ಆಯುಧ ಪೂಜೆಚಿತ್ರದಲ್ಲಿ ಅಭಿನಯಿಸಲಿದ್ದಾರೆ.

***

ಮಾತಾಡ್ ಮಾತಾಡ್ ಮಲ್ಲಿಗೆಚಿತ್ರದ ಧ್ವನಿ ಸುರಳಿ ಬಿಡುಗಡೆಯಾಗಿದೆ. ನಾಗತಿಹಳ್ಳಿ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ವಿಷ್ಣುವರ್ಧನ್,ಸುಹಾಸಿನಿ ಪ್ರಮುಖ ಪಾತ್ರದಲ್ಲಿದ್ದಾರೆ. ರೈತನ ಪಾತ್ರದಲ್ಲಿ ವಿಷ್ಣು ಅಭಿನಯಿಸಿದ್ದಾರೆ.

***

ಈಟೀವಿಯಲ್ಲಿ ಪ್ರಸಾರವಾಗುತ್ತಿರುವ ಮಂಥನಧಾರಾವಾಹಿಯನ್ನು ವೀಕ್ಷಕರು ಒಪ್ಪಿದ್ದಾರೆ. ಧಾರಾವಾಹಿ ಮೊನ್ನೆಯಷ್ಟೇ 100ಕಂತುಗಳನ್ನು ಪೂರ್ಣಗೊಳಿಸಿದೆ. ಕತೆ, ಚಿತ್ರಕತೆ ಮತ್ತು ಸಂಭಾಷಣೆ ಹೊಸೆಯುತ್ತಿರುವ ಸೇತುರಾಂ, ಮಂಥನದ ನಿಜವಾದ ಹೀರೋ. ಈ ವಯಸ್ಸಿನಲ್ಲಿ ಸೀರಿಯಲ್ ಸೋತರೇ, ಆ ಪರಿಸ್ಥಿತಿಯನ್ನು ನಿಬಾಯಿಸುವುದು ಹೇಗಪ್ಪಾ ಎಂಬ ಚಿಂತೆ ಅವರಿಗೆ ಬಂದಿತ್ತಂತೆ. ಆದರೆ ವೀಕ್ಷಕರು ಅವರ ಕೈಹಿಡಿದಿದ್ದಾರೆ. ಟಿ.ಎನ್.ಸೀತಾರಾಂ ಸೀರಿಯಲ್ ಮೀರಿಸುವಂತೆ ಮಂಥನ ಮುನ್ನಡೆದಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada