»   » ಲೈಂಗಿಕ ಕಾರ್ಯಕರ್ತೆಯರ ಜೊತೆ ಸಂಜಯ್ ರಾಖಿ ಸಂಭ್ರಮ!

ಲೈಂಗಿಕ ಕಾರ್ಯಕರ್ತೆಯರ ಜೊತೆ ಸಂಜಯ್ ರಾಖಿ ಸಂಭ್ರಮ!

Subscribe to Filmibeat Kannada


ಮುಂಬಯಿ, ಆಗಸ್ಟ್ 28: ಲೈಂಗಿಕ ಕಾರ್ಯಕರ್ತೆಯರು ಆಯೋಜಿಸಿರುವ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ, ಬಾಲಿವುಡ್ ನಟ ಸಂಜಯ್ ದತ್ ಮಂಗಳವಾರ ಪಾಲ್ಗೊಳ್ಳಲಿದ್ದಾರೆ.

ಇಂತಹ ಕಾರ್ಯಕ್ರಮವನ್ನು ಪೀಪಲ್ಸ್ ಹೆಲ್ತ್ ಆರ್ಗನೈಸೇಶನ್ (ಪಿಹೆಚ್‍ಒ) 1984 ರಿಂದಲೂ ನಡೆಸುತ್ತಾ ಬಂದಿದ್ದು, ಈ ಮುಂಚೆ ಸುನಿಲ್ ದತ್ ಈ ಸಂಸ್ಥೆಯ ಅಧ್ಯಕ್ಷರಾಗಿದ್ದರು.

ಕಾರ್ಯಕ್ರಮದಲ್ಲಿ ನಟ ಸಂಜಯ್ ದತ್ ಜೊತೆ ಅವರ ಭಾವಂದಿರಾದ ಗೌರವ್ ಮತ್ತು ರಾಂಕನ್ ಸಹ ಪಾಲ್ಗೊಳ್ಳುವರು. ಇವರು ಏಡ್ಸ್ ಪೀಡಿತರಿಗೆ ಸಾಂತ್ವನ ಹೇಳುವರು ಎಂದು ಪಿಹೆಚ್‍ಒ ಕಾರ್ಯದರ್ಶಿ ಜನರಲ್ ಐ.ಎಸ್.ಗಿಲಾದ ಸುದ್ದಿಗಾರರಿಗೆ ತಿಳಿಸಿದರು.

ಲೈಂಗಿಕ ಕಾರ್ಯಕರ್ತೆಯರನ್ನು ಮುಖ್ಯವಾಹಿನಿಗೆ ತರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಸಂಜಯ್‍ದತ್ , ಕುಮಾರ್ ಗೌರವ್ ಮತ್ತು ರಾಂಕನ್ ಅವರು ಲೈಂಗಿಕ ಕಾರ್ಯಕರ್ತೆಯರ ಸಾಮಾಜಿಕ ಆರೋಗ್ಯವನ್ನು ಸುಧಾರಿಸಲು ಶ್ರಮಿಸುತ್ತಿದ್ದಾರೆ. ಫಾಲ್ಕ್‍ಲ್ಯಾಂಡ್ ರಸ್ತೆಯಲ್ಲಿರುವ ನ್ಯೂ ರೋಶನ್ ಸಿನಿಮಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಗಿಲಾದ ಹೇಳಿದರು.

ಸಾರ್ವಜನಿಕ ವರ್ಚಸ್ಸಿನ ಸುನಿಲ್‍ದತ್ ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು. ಅವರ ಕಲ್ಯಾಣಕ್ಕಾಗಿ ಬೀದಿಗಿಳಿದು ಭಾಗವಹಿಸುತ್ತಿದ್ದರು, ತಮ್ಮ ಕೊನೆಯುಸಿರುವವರೆಗೂ ಪಿಹೆಚ್‍ಒದ ಅಧ್ಯಕ್ಷರಾಗಿದ್ದರು ಎಂದು ಗಿಲಾದ ನೆನಪು ಮಾಡಿಕೊಂಡರು.

ಚಿತ್ರರಂಗದ ದಂತಕತೆಯಾದ ದಿವಂಗತ ವಿ.ಶಾಂತಾರಾಮ್‍ ಅವರ ಪುತ್ರರು ಹಾಗೂ ಈಗಿನ ಪಿಹೆಚ್‍ಪಿ ಅಧ್ಯಕ್ಷರಾದ ಕಿರಣ್ ಶಾಂತಾರಾಮ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada