»   » ‘ಪ್ರೇಮಖೈದಿ’ ರಾಧಿಕಾ ಗಂಡ (?) ರತನ್‌ ಕುಮಾರ್‌ ನಿಧನ

‘ಪ್ರೇಮಖೈದಿ’ ರಾಧಿಕಾ ಗಂಡ (?) ರತನ್‌ ಕುಮಾರ್‌ ನಿಧನ

Posted By: Staff
Subscribe to Filmibeat Kannada

ಯಶಸ್ಸಿನ ಉತ್ತುಂಗದಲ್ಲಿರುವ ಸ್ಯಾಂಡಲ್‌ವುಡ್‌ನ ಹೊಸ ತಾರೆ ರಾಧಿಕಾ ಗಂಡ ಎಂದು ಹೇಳಿಕೊಂಡು ಸಾಕಷ್ಟು ಸದ್ದು ಮಾಡಿದ್ದ ರತನ್‌ ಕುಮಾರ್‌ ಅಲಿಯಾಸ್‌ ರತ್ನಟಾಕರ್‌ ಬಂಗೇರಾ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡ ಕಾರಣ ಮಂಗಳೂರಿನ ಆಸ್ಪತ್ರೆಯಾಂದಕ್ಕೆ ಅವರನ್ನು ಕೊಂಡೊಯ್ಯಲಾಯಿತು. ಆದರೆ ಅಷ್ಟು ಹೊತ್ತಿಗೆ ರತನ್‌ ಪ್ರಾಣಪಕ್ಷಿ ಹಾರಿಹೋಗಿತ್ತು. ಅವರ ವಯಸ್ಸು 28.

ಕಳೆದ ಏಪ್ರಿಲ್‌ನಲ್ಲಿ ರಾಧಿಕಾ ಕಳವಿನ ಕುರಿತು ಖಾಸಗಿ ದೂರು ಕೊಟ್ಟಿದ್ದ ರತನ್‌ ಮನವಿಗೆ ಸ್ಪಂದಿಸಿ ಜೆಎಂಎಫ್‌ಸಿ ಕೋರ್ಟು ರಾಧಿಕಾ ಪತ್ತೆಗೆ ಸರ್ಚ್‌ ವಾರೆಂಟ್‌ ಹೊರಡಿಸಿತ್ತು. ತಂದೆ ದೇವರಾಜ್‌ ಮಗಳನ್ನು ಬಲವಂತವಾಗಿ ತನ್ನ ಮನೆಯಲ್ಲಿಟ್ಟುಕೊಂಡಿದ್ದಾರೆ ಎಂಬುದು ರತನ್‌ ದೂರಿನಲ್ಲಿತ್ತು. ಅದಕ್ಕೆ ಉತ್ತರ ಕೊಟ್ಟಿದ್ದ ದೇವರಾಜ್‌, ತನ್ನ ಮಗಳು ರಾಧಿಕಾ ಅವಿವಾಹಿತೆ. ರತನ್‌ ಸುಮ್ಮನೆ ಪುಗ್ಗ ಬಿಟ್ಟು, ಅವಳ ಕೆರಿಯರ್‌ ಹಾಳುಗೆಡಹಲು ಪ್ರಯತ್ನಿಸುತ್ತಿದ್ದಾನೆ ಎಂದು ದೇವರಾಜ್‌ ರತನ್‌ ದೂರಿಗೆ ಉತ್ತರವನ್ನೂ ಕೊಟ್ಟಿದ್ದರು.

ತನಗೆ ಮದುವೆ ಆಗಿರುವ ವಿಷಯವನ್ನು ರಾಧಿಕಾ ಅಪ್ಪಿ ತಪ್ಪಿ ಕೂಡ ಹೇಳಿಲ್ಲ. ಇಷ್ಟೆಲ್ಲಾ ವಿವಾದಗಳ ನಡುವೆಯೂ ಅವರು ಸಿನಿಮಾದಲ್ಲಿ ಬೆಳೆಯುತ್ತಿರುವುದಂತೂ ನಿಜ.

English summary
Actress Radhikas husband dies of heart attack
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada