»   » ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ‘ಅ,ಆ,ಇ,ಈ’ ಆಯ್ಕೆ

ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ‘ಅ,ಆ,ಇ,ಈ’ ಆಯ್ಕೆ

Posted By:
Subscribe to Filmibeat Kannada

ಬೆಂಗಳೂರು: ಹೈದರಾಬಾದ್‌ನಲ್ಲಿ ನಡೆಯಲಿರುವ ಹದಿನಾಲ್ಕನೇ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ, ಚಿಲ್ಟ್ರನ್‌ ಇಂಡಿಯಾದ ಅಧ್ಯಕ್ಷ ನಂಜುಂಡೇಗೌಡ ಅವರ ನಿರ್ದೇಶನದ ‘ಅ,ಆ,ಇ,ಈ’ ಎಂಬ ಕನ್ನಡ ಚಿತ್ರ ಆಯ್ಕೆಯಾಗಿದೆ.

ಪ್ರತಿಷ್ಠಿತ ಗೋಲ್ಡನ್‌ ಎಲಿಫೆಂಡ್‌ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ದೇಶವಿದೇಶದಿಂದ ಸುಮಾರು 300 ಚಿತ್ರಗಳು ಆಯ್ಕೆ ಬಯಸಿದ್ದವು. ಇವುಗಳ ಪೈಕಿ 70ಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು, ‘ಜಾಗತಿಕ ಮಕ್ಕಳ ಸಿನಿಮಾ’ ವಿಭಾಗಕ್ಕೆ ಕನ್ನಡದ ‘ಅ,ಆ,ಇ,ಈ ’ ಮತ್ತು ನಟಿ ಆರತಿ ಅವರು ನಿರ್ದೇಶಿಸಿರುವ ‘ಮಿಠಾಯಿ ಮನೆ’ ಚಿತ್ರ ಆಯ್ಕೆಗೊಂಡಿದೆ.

ಪಿ.ಶೇಷಾದ್ರಿ ನಿರ್ದೇಶನದ ‘ತುತ್ತೂರಿ’ ಚಿತ್ರ ಅಂತಾರಾಷ್ಟ್ರೀಯ ಮಕ್ಕಳ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಪೈಪೋಟಿ ನಡೆಸಲಿದೆ. ರಾಮದಾಸ ನಾಯ್ಡು ನಿರ್ದೇಶನದ ‘ಪ್ರವಾಹ’ ಚಿತ್ರ ಏಷಿಯನ್‌ ವಿಭಾಗದಲ್ಲಿ ಸ್ಪರ್ಧಾತ್ಮಕ ಚಿತ್ರಗಳ ಆಯ್ಕೆಗೆ ಪ್ರವೇಶ ಪಡೆದಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada