»   » ಶಿರಿನ್‌ಗೆ ಹಳೇ ಗಂಡನ ಪಾದವೇ ಗತಿ!

ಶಿರಿನ್‌ಗೆ ಹಳೇ ಗಂಡನ ಪಾದವೇ ಗತಿ!

Subscribe to Filmibeat Kannada

ಬೆಂಗಳೂರು ಮೂಲದ ಗ್ಲ್ಯಾಮರಸ್‌ ನಟಿ ಶಿರಿನ್‌ ‘ಭೂಪತಿ’ ಚಿತ್ರದಲ್ಲಿ ನಟಿಸುವ ಮೂಲಕ, ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.

ಅವರು ಈ ಮೊದಲು ಎಂ.ಎಸ್‌.ರಮೇಶ್‌ ನಿರ್ದೇಶನದ ‘ಧ್ರುವ’ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದರು. ದರ್ಶನ್‌ ಆ ಚಿತ್ರದ ನಾಯಕ. ‘ಭೂಪತಿ’ ಚಿತ್ರದಲ್ಲೂ ದರ್ಶನ್ನೇ ನಾಯಕ!

ಕನ್ನಡ ಚಿತ್ರರಂಗಕ್ಕೆ ಮರಳಿದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅವರು, ಭವಿಷ್ಯದಲ್ಲಿ ಹೆಚ್ಚೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವ ಆಶಾಭಾವನೆ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ತಮ್ಮ ವಾಸ್ತವ್ಯ ಮುಂಬಯಿಗೆ ಬದಲಾಯಿಸಿಕೊಂಡಿರುವ ಅವರು, ಸಿನಿಮಾಗಳ ಜೊತೆಜೊತೆಗೆ ಮಾಡಲಿಂಗ್‌ನಲ್ಲೂ ಬಿಜಿಯಾಗಿದ್ದಾರೆ.

‘ಧ್ರುವ’ ಚಿತ್ರದ ನಂತರ ಶಿರಿನ್‌ ತಮಿಳು ಚಿತ್ರರಂಗಕ್ಕೆ ವಲಸೆ ಹೋಗಿದ್ದರು. ಅವರು ಅಭಿನಯಿಸಿದ ಮೊಟ್ಟಮೊದಲ ತಮಿಳು ಚಿತ್ರ ‘ತುಳ್ಳುವಾದೋ ಇಲಮೈ’, ಭರ್ಜರಿ ಯಶಸ್ಸು ಗಳಿಸಿದ್ದೇ ನೆಪವಾಗಿ, ತಮಿಳಿನಲ್ಲಿ ಮಿಂಚಿದ್ದರು. ಆನಂತರ ವಿವಾದಗಳಿಗೆ ಈಡಾದ ಕಾರಣ, ಅವಕಾಶಗಳು ಕಡಿಮೆಯಾಗುತ್ತಾ ಬಂದವು. ‘ಹಳೇ ಗಂಡನ ಪಾದವೇ ಗತಿ’ ಎಂಬಂತೆ, ಶಿರಿನ್‌ ತವರಿಗೆ ಮರಳಿದ್ದಾರೆ.

ಶಿರಿನ್‌ ಫೋಟೋಗ್ಯಾಲರಿ

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada