twitter
    For Quick Alerts
    ALLOW NOTIFICATIONS  
    For Daily Alerts

    ದೀಪಧಾರಿಣಿ ಲತಾ ಮಂಗೇಶ್ಕರ್‌, ಐಶ್ವರ್ಯಾ-ರಾಣಿ ನೆರವು

    By Super
    |

    ಗಾಂಧಿ ಜಯಂತಿ ಮುನ್ನಾದಿನ ಅಕ್ಟೋಬರ್‌ 1 ರ ಮಂಗಳವಾರದಿಂದ ರಾಜಧಾನಿ ದೆಹಲಿಯಲ್ಲಿ ಪ್ರಾರಂಭವಾಗುವ ಭಾರತದ 33 ನೇ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ದೇವದಾಸ್‌' ಚಿತ್ರದ್ದೇ ಸದ್ದು. ಐವತ್ತು ಕೋಟಿ ರುಪಾಯಿ ಬಜೆಟ್ಟಿನ ಸಂಜಯ್‌ ಲೀಲಾ ಬನ್ಸಾಲಿ ಅವರ 'ದೇವದಾಸ್‌' ಮಾತ್ರವಲ್ಲ, 1935 ರಿಂದೀಚೆಗೆ ತೆರೆ ಕಂಡ ಏಳು ದೇವದಾಸ್‌ ಚಿತ್ರಗಳೂ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ.

    ದೇವದಾಸ್‌ ನಿರ್ಮಾಣ ಕಥಾನಕವು ಇಂತಿದೆ :

    1935 ರಲ್ಲಿ ಬಂಗಾಳಿ ದೇವದಾಸ್‌, ನಿರ್ದೇಶನ- ಪಿ.ಸಿ.ಬರೂವ.
    1935 ರಲ್ಲಿ ಪಿ.ಸಿ.ಬರೂವ ಅವರಿಂದಲೇ ಹಿಂದಿಯಲ್ಲಿ ದೇವದಾಸ್‌.
    1953 ರಲ್ಲಿ ತೆಲುಗಿನಲ್ಲಿ. ನಿರ್ದೇಶನ- ವೇದಾಂತಂ ರಾಘವಯ್ಯ.
    1955 ರಲ್ಲಿ ಬಿಮಲ್‌ರಾಯ್‌ ನಿರ್ದೇಶನದ ದೇವದಾಸ್‌.
    1974 ರಲ್ಲಿ ವಿಜಯ ನಿರ್ಮಲ ನಿರ್ದೇಶನದ ತೆಲುಗು ದೇವದಾಸ್‌.
    2002 ರಲ್ಲಿ ಬಂಗಾಳಿಯಲ್ಲಿ ದೇವದಾಸು. ನಿರ್ದೇಶನ- ದೇಬ್‌ದಾಸ್‌.
    2002 ರಲ್ಲಿಯೇ ಸಂಜಯ್‌ ಲೀಲಾ ಬನ್ಸಾಲಿಯ ಹಿಂದಿ ದೇವದಾಸ್‌.

    ತೃತೀಯ ಜಗತ್ತಿನ ರಾಷ್ಟ್ರಗಳೂ ಸೇರಿದಂತೆ ನಲವತ್ತು ದೇಶಗಳು 2 ಸಿನಿಮಾಗಳಲ್ಲಿ ತಯಾರಿಸಿದ 65 ಸಿನಿಮಾಗಳು ಚಿತ್ರೋತ್ಸವದ ವಿಶ್ವ ಸಿನಿಮಾ ವಿಭಾಗದಲ್ಲಿ ಪ್ರದರ್ಶನವಾಗಲಿವೆ. ಭಾರತೀಯ ಪನೋರಮಾ ವಿಭಾಗದಲ್ಲಿ ಸ್ವರ್ಣಕಮಲ ಪ್ರಶಸ್ತಿ ವಿಜೇತ ಕನ್ನಡದ ದ್ವೀಪ, ನೀಲಾ ಹಾಗೂ ಅತಿಥಿ ಚಿತ್ರಗಳು ಸೇರಿದಂತೆ ಒಟ್ಟು 20 ಚಿತ್ರಗಳು ಪ್ರದರ್ಶನವಾಗಲಿವೆ.

    ಲತಾ ಮಂಗೇಶ್ಕರ್‌ ಅವರಿಂದ ಉದ್ಘಾಟನೆ
    ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರು ದೀಪ ಬೆಳಗುವ ಮೂಲಕ ಚಿತ್ರೋತ್ಸವವನ್ನು ಉದ್ಘಾಟಿಸುವರು. ಚಿತ್ರತಾರೆಯರಾದ ಐಶ್ವರ್ಯಾ ರೈ ಹಾಗೂ ರಾಣಿ ಮುಖರ್ಜಿ ದೀಪ ಬೆಳಗಲು ಲತಾ ಮಂಗೇಶ್ಕರ್‌ ಅವರಿಗೆ ಸಹಾಯ ಮಾಡುವರು.

    ಕಳೆದ ವರ್ಷ ಕರ್ನಾಟಕದಲ್ಲಿ ನಿಯೋಜಿತವಾಗಿದ್ದ ಚಿತ್ರೋತ್ಸವ, ರಾಜ್ಯದಲ್ಲಿ ತಲೆದೋರಿದ ಬರಗಾಲದ ಕಾರಣದಿಂದ ರದ್ದಾಗಿತ್ತು.ಪೂರಕ ಓದಿಗೆ-

    English summary
    Latha Mangeshkar to inaugurate International film festival in Delhi on October 1st, Seven films on Devdas to be screened
    Thursday, July 11, 2013, 12:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X