»   » ಡಾ.ರಾಜ್‌ಗೆ ‘ಈಟೀವಿ-ವಾಟಿಕ ವರ್ಷದ ಕನ್ನಡಿಗ 2003’ ಪಟ್ಟ

ಡಾ.ರಾಜ್‌ಗೆ ‘ಈಟೀವಿ-ವಾಟಿಕ ವರ್ಷದ ಕನ್ನಡಿಗ 2003’ ಪಟ್ಟ

Posted By: Super
Subscribe to Filmibeat Kannada

ಬೆಂಗಳೂರು : ಪ್ರಪ್ರಥಮ 'ಈಟೀವಿ-ವಾಟಿಕ ವರ್ಷದ ಕನ್ನಡಿಗ 2003" ಪ್ರಶಸ್ತಿಗೆ ವರನಟ ಡಾ.ರಾಜಕುಮಾರ್‌ ಆಯ್ಕೆಯಾಗಿದ್ದಾರೆ.

ವಾಟಿಕ ಸಂಸ್ಥೆಯ ಸಹಯೋಗದಲ್ಲಿ ಈಟೀವಿ ಕನ್ನಡ ವಾಹಿನಿಯು ನೀಡುತ್ತಿರುವ ವರ್ಷದ ಕನ್ನಡಿಗ ಪ್ರಶಸ್ತಿಯನ್ನು ಈ ವರ್ಷದಿಂದ ಪ್ರಾರಂಭಿಸಲಾಗಿದ್ದು , ಪ್ರಪ್ರಥಮ ಪ್ರಶಸ್ತಿ ರಾಜ್‌ಕುಮಾರ್‌ ಅವರಿಗೆ ದೊರೆತಿದೆ. ಅ.29ರ ಬುಧವಾರ ಸಂಜೆ ಭಾರತೀಯ ವಿಜ್ಞಾನ ಸಂಸ್ಥೆಯ ಟಾಟಾ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ರಾಜಕುಮಾರ್‌ ಅವರಿಗೆ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡುವರು.

ವರ್ಷದ ಕನ್ನಡಿಗ ಪ್ರಶಸ್ತಿಗಾಗಿ ಈಟೀವಿ ಕನ್ನಡ ವ್ಯಾಪಕ ಸಮೀಕ್ಷೆ ನಡೆಸಿತ್ತು . ಜಿಲ್ಲಾಕೇಂದ್ರಗಳು ಹಾಗೂ ಪ್ರಮುಖ ನಗರಗಳಲ್ಲಿ ವರ್ಷದ ಕನ್ನಡಿಗ ಪ್ರಶಸ್ತಿಯ ಆಯ್ಕೆಗೆ ಮತದಾನ ನಡೆಸಲಾಗಿತ್ತು . ಅಂಚೆಯ ಮೂಲಕ ಕನ್ನಡಿಗರು ತಮ್ಮ ಆಯ್ಕೆಯನ್ನು ತಿಳಿಸಲು ಅವಕಾಶ ಕಲ್ಪಿಸಲಾಗಿತ್ತು . ಕನ್ನಡಿಗರ ಬಹುಮತದ ಆಯ್ಕೆಯ ಮೂಲಕ ರಾಜ್‌ 2003ನೇ ಇಸವಿಯ ವರ್ಷದ ಕನ್ನಡಿಗರಾಗಿ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ನಾಡೋಜ ಪಾಟೀಲ ಪುಟ್ಟಪ್ಪ , ಕ್ರಿಕೆಟಿಗ ರಾಹುಲ್‌ ದ್ರಾವಿಡ್‌, ನಟ ವಿಷ್ಣುವರ್ಧನ್‌ ಹಾಗೂ ಉಪೇಂದ್ರ ಸೇರಿದಂತೆ ಹತ್ತು ಮಂದಿ ಗಣ್ಯರು, ಈಟೀವಿ-ವಾಟಿಕಾ ವರ್ಷದ ಕನ್ನಡಿಗ ಪ್ರಶಸ್ತಿಯ ಅಂತಿಮ ಹಂತದ ರೇಸಿನಲ್ಲಿದ್ದರು.

(ಇನ್ಫೋ ವಾರ್ತೆ)

English summary
Veteran kannada artist Dr.Rajkumar is vatika person of the year

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada