»   » 2007ರಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್‌ ಮದುವೆ?

2007ರಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್‌ ಮದುವೆ?

Posted By:
Subscribe to Filmibeat Kannada


ನವೆಂಬರ್‌ 1ರ ತಮ್ಮ ಹುಟ್ಟುಹಬ್ಬದಲ್ಲಿ ಐಶ್‌ ತಮ್ಮ ಮದುವೆ ವಿಷಯ ಪ್ರಕಟಿಸಬಹುದು.

ಬೆಂಗಳೂರು : ಐಶ್ವರ್ಯ ರೈ ಮದುವೆ ಯಾವಾಗ ಎಂಬ ಪ್ರಶ್ನೆಗೆ ಅಮಿತಾಭ್‌ ಬಚ್ಚನ್‌ ಕುಟುಂಬದ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ, ಸ್ಪಷ್ಟವಾದ ಉತ್ತರ ನೀಡಿದ್ದಾರೆ.

2007ರ ಫೆಬ್ರವರಿ ತಿಂಗಳಲ್ಲಿ ಐಶ್ವರ್ಯ ಮತ್ತು ಅಭಿಷೇಕ್‌ ಬಚ್ಚನ್‌ರ ವಿವಾಹ ನೆರವೇರಲಿದೆ ಎಂದು ದಿನಪತ್ರಿಕೆಯಾಂದರಲ್ಲಿ ಚಂದ್ರಶೇಖರ ಸ್ವಾಮೀಜಿ ತಿಳಿಸಿದ್ದಾರೆ. ಬೆಂಗಳೂರಿನ ಆರ್‌.ಟಿ.ನಗರದಲ್ಲಿ ಆಶ್ರಮ ಹೊಂದಿರುವ ಸ್ವಾಮೀಜಿ, ನಟ ರಾಜ್‌ಕುಮಾರ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮತ್ತಿತರ ಗಣ್ಯರ ಕುಟುಂಬಗಳಿಗೆ ಆಪ್ತರಾದವರು.

ಮಣಿರತ್ನಂ ನಿರ್ದೇಶನದ ‘ಗುರು’ ಚಿತ್ರೀಕರಣ, ಹೊಸಪೇಟೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧೆಡೆಯಲ್ಲಿ ನಡೆದಾಗ, ಸಾಕಷ್ಟು ಸಲ ಐಶ್ವರ್ಯ ಮತ್ತು ಅಭಿಷೇಕ್‌ ತಮ್ಮನ್ನು ಭೇಟಿ ಮಾಡಿದ್ದಾಗಿ, ಮದುವೆ ಸೇರಿದಂತೆ ಇನ್ನಿತರ ವಿಷಯಗಳನ್ನು ಚರ್ಚಿಸಿದ್ದಾಗಿ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.

ನವೆಂಬರ್‌ 1 ಐಶ್ವರ್ಯ ಹುಟ್ಟಿದ ಹಬ್ಬ. ಈ ಸಂದರ್ಭದಲ್ಲಿ ತಮ್ಮ ಮದುವೆ ವಿಚಾರವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಐಶ್ವರ್ಯ ಅವರದು ಧನು ರಾಶಿ, ಅಭಿಷೇಕ್‌ ಅವರದು ಕುಂಭ ರಾಶಿ. ಕೆಲವು ಸಮಸ್ಯೆಗಳಿಂದಾಗಿ 2006ರಲ್ಲಿ ವಿವಾಹ ನೆರವೇರಲಿಲ್ಲ. ಆದರೆ ಅ.27ರಿಂದ ಗುರು ಇವರಿಬ್ಬರ ರಾಶಿಗೆ ಪ್ರವೇಶಿಸುವುದರಿಂದ ಶುಭಕಾರ್ಯ ನೆರವೇರಲಿದೆ. ಅಲ್ಲದೇ ಐಶ್ವರ್ಯ ಪಾಲಿಗೆ 8 ದುರದೃಷ್ಟದ ಸಂಖ್ಯೆ. ಹೀಗಾಗಿ 2007ರಲ್ಲಿಯೇ ಮದುವೆಯಾಗುವಂತೆ ಸೂಚಿಸಿದ್ದೇನೆ. ಐಶ್ವರ್ಯ ಮತ್ತು ಅಭಿಷೇಕ್‌ ಪಾಲಿಗೆ 9 ಅದೃಷ್ಟದ ಸಂಖ್ಯೆಎಂದು ಸ್ವಾಮೀಜಿ ತಿಳಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada