»   » ಶಾರುಖ್‌ ಖಾನ್‌ ಚಿತ್ರದಲ್ಲಿ ದೀಪಿಕಾ ಪಡುಕೋಣೆ

ಶಾರುಖ್‌ ಖಾನ್‌ ಚಿತ್ರದಲ್ಲಿ ದೀಪಿಕಾ ಪಡುಕೋಣೆ

Posted By:
Subscribe to Filmibeat Kannada


ತಮ್ಮ ಮೊದಲ ಚಿತ್ರದ ಮೂಲಕವೇ, ಎಲ್ಲರ ಗಮನ ಸೆಳೆದವರು ದೀಪಿಕಾ ಪಡುಕೋಣೆ. ಬಳುಕುವ ದೇಹದ ದೀಪಿಕಾ ಬಾಲಿವುಡ್‌ಗೆ ಹಾರಲಿದ್ದು, ಶಾರುಖ್‌ ಖಾನ್‌ ಜೋಡಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ. ದೊಡ್ಡ ಬಜೆಟ್‌ನ ಈ ಚಿತ್ರದ ಮೂಲಕ ದೀಪಿಕಾ, ಗಟ್ಟಿಯಾಗಿ ಬಾಲಿವುಡ್‌ನಲ್ಲಿ ನಿಲ್ಲಲಿದ್ದಾರೆ. ಫರ್ಹಾ ಖಾನ್‌ ಚಿತ್ರದ ನಿರ್ದೇಶಕರು ಎನ್ನಲಾಗಿದೆ.

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ, ಉಪೇಂದ್ರ ಹೊಸ ರೂಪದಲ್ಲಿ ಮಿಂಚಿದ ‘ಐಶ್ವರ್ಯ’ ಚಿತ್ರದಿಂದಾಗಿ ದಕ್ಷಿಣ ಭಾರತ ಮತ್ತು ಬಾಲಿವುಡ್‌ನಲ್ಲಿ ದೀಪಿಕಾ, ಗುರ್ತಿಸಲ್ಬಟ್ಟವರು. ಈ ಚಿತ್ರದ ಬಿಡುಗಡೆಗೆ ಮೊದಲೇ, ತಾರಾ ಮೌಲ್ಯ ಪಡೆದವರು.

ಹಿಂದಿ, ತಮಿಳು, ತೆಲುಗು ನಿರ್ಮಾಪಕರು, ಕಾಲ್‌ಶೀಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ತಮ್ಮ ತಮಿಳು ಚಿತ್ರದಲ್ಲಿ ನಟಿಸಲು ದೀಪಿಕಾ ಒಪ್ಪಿದ್ದಾರೆಂದು ಗೌತಮ್‌ ಮೆನನ್‌ ಹೇಳಿಕೆ ನೀಡಿ, ನಂತರ ನಿರಾಕರಿಸಿದ್ದಾರೆ. ದೀಪಿಕಾರ ಮುಂದೆ ಮಾಡೆಲಿಂಗ್‌ ಮತ್ತು ಚಿತ್ರರಂಗ ಎಂಬ ಎರಡು ದಾರಿಗಳಿದ್ದು, ಯಾವುದು ಸೂಕ್ತ ಎಂದು ಆಲೋಚಿಸುತ್ತಿದ್ದಾರೆ.

ಅಂದ ಹಾಗೆ; ದೀಪಿಕಾ ಪಡುಕೋಣೆ, ಖ್ಯಾತ ಕ್ರೀಡಾಪಟು ಪ್ರಕಾಶ್‌ ಪಡುಕೋಣೆ ಅವರ ಪುತ್ರಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada