»   » ಕಿರುತೆರೆಯಲ್ಲಿ ಕನ್ನಡ ಚಿತ್ರ "ಅ ಆ ಇ ಈ" ಪ್ರಿಮಿಯರ್

ಕಿರುತೆರೆಯಲ್ಲಿ ಕನ್ನಡ ಚಿತ್ರ "ಅ ಆ ಇ ಈ" ಪ್ರಿಮಿಯರ್

Subscribe to Filmibeat Kannada


ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಿರುತೆರೆಯಲ್ಲಿ ಚಲನಚಿತ್ರವೊಂದರ ಪ್ರೀಮಿಯರ್ ಶೋ ತೆರೆಕಾಣುತ್ತಿದೆ. ಜೀ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಸದಭಿರುಚಿ ಸಿನೆಮಾ ನಿರ್ದೇಶಕರಾದ ನಂಜುಂಡೆ ಗೌಡ ಅವರ ಪ್ರಶಸ್ತಿ ವಿಜೇತ ಸಿನೆಮಾ "ಅ ಆ ಇ ಈ" ಇದೇ ಶನಿವಾರ ಡಿಸೆಂಬರ್ 1ರಂದು ಸಾಯಂಕಾಲ 5 ಗಂಟೆಗೆ ಮೂಡಿ ಬರಲಿದೆ.

ಶಿಕ್ಷಕ ವೃತ್ತಿಯನ್ನು ಗೌರವಿಸುವ ಶಿಕ್ಷಕಿ ವಿದ್ಯಾ ಈ ಕಥೆಯ ಕೇಂದ್ರ ಬಿಂದು. ವೃತ್ತಿಯಲ್ಲಿ ವರ್ಗಾವಣೆಗೊಂಡು ಆದಿವಾಸಿಗಳ ಹಾಡಿ ಇರುವಲ್ಲಿಗೆ ವರ್ಗಾವಣೆಯಾಗುತ್ತಾಳೆ. ಹಚ್ಚ ಹಸಿರಿನ ಕಾಡ ನಡುವೆ ಸ್ವಚ್ಛಂಧವಾಗಿ ಬದುಕು ನಡೆಸುತ್ತಿರುವ ಜನ ತಮ್ಮ ಮಕ್ಕಳಿಗೆ ಶಿಕ್ಷಣ ನೀಡು ಆಸಕ್ತಿ ಇರುವುದಿಲ್ಲ. ಅವರನ್ನು ಶಾಲೆಗೆ ಹೋಗುವಂತೆ ಒತ್ತಾಯಿಸುವಲ್ಲಿ ಉತ್ಸಾಹ ಹೊಂದಿರುವುದಿಲ್ಲ.

ಶಿಕ್ಷಕಿ ವಿದ್ಯಾ ಈ ಕಾಡಿನ ಮಕ್ಕಳನ್ನು ನಾಡಿನ ವಿದ್ಯೆಗೆ ಹೊಂದಿಸಲು ಹೆಣಗಾಡುವ ಪರಿ ಹಾಗೂ ಶಿಕ್ಷಣ ಹಾಗೂ ಶಾಲೆ ಮಕ್ಕಳ ಮೇಲೆ ಬೀರುವ ಪ್ರಭಾವ ಇವುಗಳ ಸುತ್ತ ಸುಂದರವಾಗಿ ಹೆಣೆದಿರುವ ಕಥೆ ಮನೆಮಂದಿಗೆಲ್ಲ ಆಪ್ತವಾಗುತ್ತದೆ.

ಸದಭಿರುಚಿಯ ಸಿನೆಮಾ ನಿರ್ದೇಶಕ ನಮಜುಂಡೆಗೌಡರು ಈ ಸಿನೆಮಾ ನಿರ್ದೇಶಕರು. ಸಂದೇಶ ನಾಗರಾಜ್ ನಿರ್ಮಾಪಕರಗಿದ್ದಾರೆ. ತಾರಾಗಣದಲ್ಲಿ ಪ್ರೇಮಾ, ರಮೇಶ್ ಅರವಿಂದ್, ಹರ್ಷಲೇಖ ಇದ್ದಾರೆ. ಉತ್ತಮ ಸಂದೇಶ ಹೊಂದಿರುವ ಈ ಚಲನಚಿತ್ರವನ್ನು ಮಕ್ಕಳ ಸಮೇತ ನೋಡಬೇಕು.

ರಮೇಶ್, ಪ್ರೇಮ ಅಭಿನಯದ ಅಆಇಈ ಚಿತ್ರದ ಗ್ಯಾಲರಿ
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada