»   » ಅಂಬಿ ‘ಅಣ್ಣಾವ್ರು’ಗೆ ಗ್ರೀನ್‌ ಸಿಗ್ನಲ್‌ !

ಅಂಬಿ ‘ಅಣ್ಣಾವ್ರು’ಗೆ ಗ್ರೀನ್‌ ಸಿಗ್ನಲ್‌ !

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ರೆಬೆಲ್‌ಸ್ಟಾರ್‌ ಅಂಬರೀಶ್‌ ನಟಿಸಿರುವ ‘ಅಣ್ಣಾವ್ರು’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು , ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

ತಮಿಳಿನ ಸೂಪರ್‌ಹಿಟ್‌ ಚಿತ್ರ ದಳಪತಿಯ ಕನ್ನಡ ನಕಲು ‘ಅಣ್ಣಾವ್ರು’. ಮಣಿರತ್ನಂ ನಿರ್ದೇಶನದ ದಳಪತಿ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಮಾತ್ರಲ್ಲದೆ, ಚಿತ್ರ ವಿಮರ್ಶಕರ ಮನ್ನಣೆಯನ್ನೂ ಪಡೆದಿತ್ತು . ಕನ್ನಡದ ‘ಅಣ್ಣಾವ್ರು’ ಚಿತ್ರವನ್ನು ರಿಮೇಕ್‌ ಪರಿಣತ ಓಂಪ್ರಕಾಶ್‌ ರಾವ್‌ ನಿರ್ದೇಶಿಸಿದ್ದಾರೆ.

‘ಅಣ್ಣಾವ್ರು’ ಚಿತ್ರಕ್ಕೆ ಗಾಂಧಿನಗರದಲ್ಲಿ ತಕ್ಕಮಟ್ಟಿಗೆ ಒಳ್ಳೆಯ ಮಾತು ಕೇಳಿಬರುತ್ತಿದೆ. ಚಿತ್ರವನ್ನು ವೀಕ್ಷಿಸಿರುವ ನಿರ್ಮಾಪಕ ಸಂದೇಶ್‌ನಾಗರಾಜ್‌ ಹಾಗೂ ನಿರ್ದೇಶಕ ಎಸ್‌.ಮಹೇಂದರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನ ಮೆಚ್ಚುತ್ತಾರೋ ಆಕಳಿಸುತ್ತಾರೋ ಎನ್ನುವುದರ ನಿರ್ಣಯಕ್ಕೆ ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕು.

ಅಂದಹಾಗೆ,
ಕೆ.ಕಲ್ಯಾಣ್‌ ‘ಅಣ್ಣಾವ್ರು’ ಚಿತ್ರದ ಗೀತೆಗಳನ್ನು ರಚಿಸಿದ್ದಾರೆ. ಸಂಗೀತ ರಾಜೇಶ್‌ ರಾಮನಾಥನ್‌ ಅವರದ್ದು . ಎಂ.ಎಸ್‌.ರಮೇಶ್‌ ಹಾಗೂ ಆರ್‌.ರಾಜಶೇಖರ್‌ ಸಂಭಾಷಣೆ ಬರೆದಿದ್ದಾರೆ. ಅಂಬರೀಶ್‌ಗೆ ಜೋಡಿಯಾಗಿ ಸುಹಾಸಿನಿ ನಟಿಸಿದ್ದಾರೆ. ದರ್ಶನ್‌ ಹಾಗೂ ಶ್ರವಂತಿ ಚಿತ್ರದ ಇತರ ಪ್ರಮುಖ ತಾರೆಗಳು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada