ತೆಲುಗಲ್ಲೂ ಗುರುಕಿರಣ್ ಸಂಗೀತ ಹಿಟ್ ಮೇಲೆ ಹಿಟ್!
ಗುರುಕಿರಣ್ ಈಗ ಕನ್ನಡದಲ್ಲಿ ಮಾತ್ರವಲ್ಲ, ತೆಲುಗಿನಲ್ಲೂ ಬೇಡಿಕೆಯುಳ್ಳ ಸಂಗೀತ ನಿರ್ದೇಶಕ! ಅವರು ಸಂಗೀತ ನೀಡಿದ ತೆಲುಗಿನ ‘ಮಹಾರಥಿ’ ಚಿತ್ರದ ಧ್ವನಿ ಸುರುಳಿಗಳಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ ಮೂಲಕ ಗುರುಕಿರಣ್ ಎಂಟ್ರಿಗೆ ಭರ್ಜರಿ ಸ್ವಾಗತ ಸಿಕ್ಕಿದಂತಾಗಿದೆ.
ಬಾಲಕೃಷ್ಣ, ಸ್ನೇಹಾ, ಮೀರಾ ಜಾಸ್ಮಿನ್ ಅಭಿನಯದ ಈ ಚಿತ್ರದ ನಿರ್ದೇಶಕರು ಪಿ.ವಾಸು. ಆಂಧ್ರ ಪ್ರದೇಶದಲ್ಲಿ ಎಲ್ಲರ ಬಾಯಲ್ಲೂ ‘ಮಹಾರಥಿ’ ಚಿತ್ರದ ಹಾಡುಗಳು ನಲಿದಾಡುತ್ತಿವೆ. ಹಿಟ್ ಹಾಡುಗಳು ‘ಟಾಪ್ 5’ ಪಟ್ಟಿಯಲ್ಲಿ ಈ ಚಿತ್ರವೂ ಒಂದು.
‘ಮಹಾರಥಿ’ ಯಶಸ್ಸಿನಿಂದ ‘ಹೊಡಿ ಮಗ ಹೊಡಿ ಮಗ’ ಖ್ಯಾತಿಯ ಗುರುಕಿರಣ್‌ಗೆ ಆಂಧ್ರದಲ್ಲೂ ಮಾರುಕಟ್ಟೆ ಸೃಷ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಅಲ್ಲಿ ಮಾರುಕಟ್ಟೆ ಕುದುರಿದರೆ, ಕನ್ನಡ ಚಿತ್ರರಂಗ ಒಬ್ಬ ಸಂಗೀತ ನಿರ್ದೇಶಕನನ್ನು ಕಳೆದುಕೊಳ್ಳುತ್ತದೆ... !!!
ನಿಮ್ಮ ಅನಿಸಿಕೆ ಬರೆಯಿರಿ


Click it and Unblock the Notifications