ದರ್ಶನ್-ನಿಖಿತಾ ಬೆಳಗಾವಿಯಲ್ಲಿ ಮತ್ತೆ ಮುಖಾಮುಖಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಟಿ ನಿಖಿತಾ ಕೆಲವೇ ದಿನಗಳಲ್ಲಿ ಮುಖಾಮುಖಿ ಆಗಲಿದ್ದಾರೆ. ಬೆಳಗಾವಿಯಲ್ಲಿ ಇಬ್ಬರ ಬೇಟಿಯೂ ನಿಶ್ಚಯವಾಗಿದೆ. ಇದಕ್ಕೆಲ್ಲಾ ಕಾರಣಕರ್ತರು ನಿರ್ದೇಶಕ ನಾಗಣ್ಣ. ಅದಕ್ಕೆ ಕಾರಣ, ಅರ್ಧ ಚಿತ್ರೀಕರಣಗೊಂಡು ಬಾಕಿ ಉಳಿದಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ. ಅದರ ಡಿಸೆಂಬರ್ 12 ರಿಂದ ಚಿತ್ರೀಕರಣ ಮುಂದುವರಿಯಲಿದೆ.

ನಾಗಣ್ಣ ನಿರ್ದೇಶನದ, ಬಹುಕೋಟಿ ವೆಚ್ಚದ ಈ ಚಿತ್ರದ ಚಿತ್ರೀಕರಣದಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿರುವ ದರ್ಶನ್-ನಿಖಿತಾ ವೃತ್ತಿ ಸಂಬಂಧ ಈ ಭೇಟಿ ಅನಿವಾರ್ಯ. ಡಿಸೆಂಬರ್ 20ಕ್ಕೆ ಆಗಮಿಸಲಿರುವ ನಿಖಿತಾ, ಅಂದು ದರ್ಶನ್ ರನ್ನು ಭೇಟಿಯಾಗಲಿದ್ದಾರೆ. ಈ ಹಿಂದೆ ತೆರೆಯಲ್ಲಿ ಹಾಗೂ ಮರೆಯಲ್ಲಿ ಬಿಂದಾಸ್ ಆಗಿದ್ದ ದರ್ಶನ್-ನಿಖಿತಾ, ಈಗ ಮೊದಲಿನಂತಿರಲು ಸಾಧ್ಯವಿಲ್ಲ.

ದರ್ಶನ್ ಅವಾಂತರಗಳ ನಂತರ ಪರಸ್ಪರ ಭೇಟಿಯಾಗಿಲ್ಲ. ಕನಿಷ್ಠ ದೂರವಾಣಿಯಲ್ಲೂ ಮಾತುಕತೆ ನಡೆಸಿಲ್ಲ. ಹಾಗಾಗಿ ಸೆಟ್‌ನಲ್ಲೇ ನಡೆಯುವ ಮುಖಾಮುಖಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಹುಶಃ ಇಬ್ಬರೂ ಇದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಮಾಡಿಕೊಂಡಿರುತ್ತಾರೆ.

ಆದರೂ ಕಲಾವಿದರಾಗಿ ಪಾತ್ರ ನಿರ್ವಹಣೆ ಮಾಡುವುದು ಅಷ್ಟು ಸುಲಭವಲ್ಲ. ಅದೂ ಭಾವುಕತೆಗೆ ಪ್ರಾಧಾನ್ಯತೆ ಇರುವ ಐತಿಹಾಸಿಕ ಪಾತ್ರ. ಸೆಟ್ ಹುಡುಗರಿಂದ ಹಿಡಿದು ಸ್ವತಃ ದರ್ಶನ್-ನಿಖಿತಾವರೆಗೂ ಆ ಕ್ಷಣ ತೀವ್ರ ಕುತೂಹಲಕ್ಕೆ ಕಾರಣ. ಪ್ರೇಕ್ಷಕರಂತೂ ಸಿನಿಮಾ ಬರುವುದನ್ನೇ ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actor Darshan and Actress Nikitha visits in Belgaum again. They acts in kannada movie Sangolli Rayanna, which is incomplete. Shooting will starts on Dec. 12. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X