»   » ಚಾಣಾಕ್ಷ ವೀರ ಮದಕರಿ ಮಗುವಿಗೆ ಹೆದರಿನಂತೆ!!

ಚಾಣಾಕ್ಷ ವೀರ ಮದಕರಿ ಮಗುವಿಗೆ ಹೆದರಿನಂತೆ!!

Posted By:
Subscribe to Filmibeat Kannada

ಈ ಮದಕರಿಯನ್ನು ವೀರ ಮದಕರಿ ಅನ್ನುವುದಕ್ಕಿಂತ ಚಾಣಕ್ಷ ಮದಕರಿ ಎನ್ನುವುದು ಸೂಕ್ತ. ಏಕೆಂದರೆ ಈತನ ಕಾರ್ಯವೈಖರಿಯೇ ಆ ರೀತಿ. ಯಾರಿಗೂ ಅಂಜದ ಮದಕರಿಯನ್ನು ಈ ಬಾರಿ ಮಗುವೊಂದು ಹೆದರಿಸಿದ ಪ್ರಸಂಗ ನಡೆದಿದೆ.

ನಾಯಕ ಸುದೀಪ್ ಹಾಗೂ ಟೆನ್ನಿಸ್‌ಕೃಷ್ಣ ಜೋಡಿ ಪೆಟ್ಟಿಗೆಯೊಂದನ್ನು ಅಪಹರಿಸಿಒಯ್ಯುತ್ತಿದ್ದಾಗ ಪೊಲೀಸ್ ಕಣ್ಣಿಗೆ ಬೀಳುತ್ತಾರೆ. ಪೆಟ್ಟಿಗೆಯಲ್ಲಿ ಏನಿದೆ? ಅದನ್ನು ತೆಗೆಯಿರಿ ಎಂದು ಪೊಲೀಸರು ಹೇಳಿದಾಗ ನಾಯಕ ಪೆಟ್ಟಿಗೆ ತೆಗೆಯುತ್ತಾನೆ. ಆಗ ಅವನಿಗೆ ಕನಸಿನಲೂ ನೆನಸದ ಅಚ್ಚರಿ. ಪೆಟ್ಟಿಗೆ ತೆಗೆದ ಕೂಡಲೆ ಅದರಿಂದ ಮಗುವೊಂದು ಬಂದು ಸುದೀಪ್ ಅವರನ್ನು ಅಪ್ಪ ಎಂದಾಗ ಅವರಿಗೆ ದಿಕ್ಕುತೋಚದಂತಾಗಿ ಕಕ್ಕಾಬಿಕ್ಕಿಯಾಗುವ ಸನ್ನಿವೇಶವನ್ನು ಮಾಗಡಿ ರಸ್ತೆಯ ತಾವರೆಕೆರೆಯಲ್ಲಿ ವೀರ ಮದಕರಿ ಚಿತ್ರಕ್ಕಾಗಿ ಚಿತ್ರೀಕರಿಸಿಕೊಳ್ಳಲಾಯಿತು.

ದಿನೇಶ್‌ಗಾಂಧಿ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಸುದೀಪ್ ನಿರ್ದೇಶಿಸುತ್ತಿದ್ದಾರೆ. ಇದು ಅವರ ನಿರ್ದೇಶನದ ಮೂರನೇ ಚಿತ್ರ. ಕೀರವಾಣಿ ಅವರ ಸಂಗೀತವಿರುವ ಈ ಚಿತ್ರಕ್ಕೆ ಶ್ರೀವೆಂಕಟ್ ಅವರ ಛಾಯಾಗ್ರಹಣವಿದೆ. ವಿಜಯೇಂದ್ರ ಪ್ರಸಾದ್ ಕಥೆ, ರವಿರಾಜ ಸಂಭಾಷಣೆ, ಕೆಂಪರಾಜ್ ಸಂಕಲನ, ಸುರೇಶ್‌ರಾಜ್ ಸಹ ನಿರ್ದೇಶನ ಹಾಗೂ ಕೆ.ವಿ.ಮಂಜಯ್ಯ ಅವರ ನಿರ್ಮಾಣನಿರ್ವಹಣೆಯಿರುವ ವೀರ ಮದಕರಿಯ ತಾರಾಬಳಗದಲ್ಲಿ ಸುದೀಪ್, ದಿನೇಶ್‌ಗಾಂಧಿ, ಟೆನ್ನಿಸ್‌ಕೃಷ್ಣ, ದೊಡ್ಡಣ್ಣ, ದೇವರಾಜ್ ಮುಂತಾದವರಿದ್ದಾರೆ.
(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada