ನಿಖಿತಾ ಮಡಿಲಿಗೆ ಮತ್ತೊಂದು ಚಿತ್ರ: ಅದು ಸೀತಾ ಪಾತ್ರ

ನಟ ದರ್ಶನ್ ವೈಯಕ್ತಿಕ ವಿವಾದಲ್ಲಿ ಸಿಲುಕಿ ಚಿತ್ರರಂಗದವರಿಂದ ನಿಷೇಧಕ್ಕೆ ಒಳಗಾಗಿ ಆಮೇಲೆ ನಿಷೇಧದಿಂದ ಬಚಾವಾದ ನಟಿ ನಿಖಿತಾ ಈಗ ಬಹುಬೇಡಿಕೆಯ ನಟಿ. ತಮಿಳಿನಲ್ಲಿ ಕೈತುಂಬಾ ಚಿತ್ರಗಳನ್ನು ಹಿಡಿದಿರುವ ಈಕೆಗೆ, ದರ್ಶನ್ ಜೊತೆ ಮಾಡುತ್ತಿರುವ ಸಂಗೊಳ್ಳಿ ರಾಯಣ್ಣ ಚಿತ್ರೀಕರಣ ಪೂರ್ಣಗೊಳ್ಳುವ ಮೊದಲೇ ಕನ್ನಡದಲ್ಲಿ ಸಾಲುಸಾಲು ಚಿತ್ರಗಳಿಗೆ ಬೇಡಿಕೆ ಬರುತ್ತಿದೆ. ಕಾಲಚಕ್ರ ತಿರುಗುವುದೆಂದರೆ ಇದೇ.

ಎಲ್ಲರೂ ಆಶ್ಚರ್ಯ ಪಡುತ್ತಿರುವ, ಪಡಲೇಬೇಕಾದ ವಿಷಯವೊಂದಿದೆ. ನಿಖಿತಾಗೆ ನಿಷೇಧ ಹೇರಿದ್ದ ನಿರ್ಮಾಪಕರೇ ಈಗ ಆಕೆಯನ್ನು ಸಂಪರ್ಕಿಸುತ್ತಿರುವ ವಿಷಯವನ್ನು ದ್ರಢೀಕರಿಸಿರುವ ನಿಖಿತಾ, "ಅವರಲ್ಲೊಬ್ಬರು 'ಐಟಂ' ಹಾಡಿಗೆ ಕುಣಿಯುವಂತೆ ಬೇಡಿಕೆ ಇಟ್ಟಿದ್ದರು. ನಾನು ನಟಿಸುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದೇನೆ" ಎಂದಿದ್ದಾರೆ. "ಐಟಂ ಹಾಡಿನ ಅಗತ್ಯ ನನಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಮಿಲನ ಪ್ರಕಾಶ್ ನಿರ್ದೇಶನದ, ರವಿಚಂದ್ರನ್ ನಾಯಕರಾಗಿರುವ ಚಿತ್ರದಲ್ಲಿ ನಟಿಸಲಿರುವ ನಿಖಿತಾ, ಇದೀಗ ಮಂಜು ಮಸ್ಕಲ್ ಮಟ್ಟಿ ನಿರ್ದೇಶನ ಚಿತ್ರದಲ್ಲಿ 'ಸೀತೆಯ' ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರ ತಮಿಳಿನ 'ರಾಮನ್ ತೇಡಿಯ ಸೀತೈ' ಚಿತ್ರದ ರೀಮೇಕ್. ಪತಿವ್ರತೆ ಸೀತೆಯ ಪಾತ್ರದಲ್ಲಿ ನಿಖಿತಾರನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆಂದು ಸುದ್ದಿ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actress Nikitha Thukral acts in kannada movie again. She told, she rejects Item song in kannada movie. Now she acts in Manju maskalmatti direction movie. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X