ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ; ರಮ್ಯಾ

By Rajendra

ಗೋಲ್ಡನ್ ಗರ್ಲ್ ರಮ್ಯಾ ತಾವು ಎರಡು ದೋಣಿಗಳಲ್ಲಿ ಪಯಣಿಸುತ್ತಿಲ್ಲ. ತಮ್ಮ ಪಯಣ ಏನಿದ್ದರೂ ಒಂದೇ ದೋಣಿಯಲ್ಲಿ ಸಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ಕಡೆ ಚಿತ್ರರಂಗ ಮತ್ತೊಂದು ಕಡೆ ರಾಜಕೀಯ ಎಂದು ಎರಡೂ ರಮ್ಯಾ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಮ್ಯಾ ಚಿತ್ರರಂಗ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ತಾವು ಯಾವುದೇ ಕಾರಣಕ್ಕೂ ಚಿತ್ರರಂಗ ಬಿಡುವುದಿಲ್ಲ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಾನು ಸ್ಪರ್ಧಿಸುತ್ತಿದ್ದೇನೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. ಸದ್ಯಕ್ಕೆ ತಾವು ಎರಡು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇವೆ. ಒಂದು 'ಸಿದ್ಲಿಂಗು' ಹಾಗೂ ಮತ್ತೊಂದು 'ಲಕ್ಕಿ' ಚಿತ್ರ.

'ಸಿದ್ಲಿಂಗು' ಚಿತ್ರದಲ್ಲಿ ತಮ್ಮದು ಮಂಗಳ ಟೀಚರ್ ಪಾತ್ರ. ಚಿತ್ರದಲ್ಲಿ ಗ್ಲಾಮರ್‌ಗೆ ಹೆಚ್ಚು ಒತ್ತು ಇಲ್ಲದಿದ್ದರೂ ಎಮೋಷನಲ್, ಹಾಸ್ಯ, ಸೆಂಟಿಮೆಂಟ್ ಪ್ರಧಾನವಾಗಿದೆ. ಒಂದೇ ಶೆಡ್ಯೂಲ್‌ನಲ್ಲಿ ಚಿತ್ರವನ್ನು ಮುಗಿಸಬೇಕಾಗಿದೆ. ವಿಜಯ ಪ್ರಸಾದ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕ ನಟ ಲೂಸ್ ಮಾದ ಯೋಗೇಶ್.

ಇನ್ನು 'ಲಕ್ಕಿ' ಚಿತ್ರ ಇಂಟರೆಸ್ಟಿಂಗ್ ಆಗಿದ್ದು, ಚಿತ್ರದಲ್ಲಿ ಹೀರೋ ಹೆಸರು ಲಕ್ಕಿ. ಅವನು ಇನ್ನೇನು ಲವ್ ಪ್ರಪೋಸ್ ಮಾಡಬೇಕು ಅನ್ನುವಷ್ಟರಲ್ಲಿ ನಾಯಿ ಅಡ್ಡಬರುತ್ತದೆ. ಅಲ್ಲಿಂದ ಚಿತ್ರ ಕಾಮಿಡಿ ಹೊರಳುತ್ತದೆ. ಡಾ.ಸೂರಿ ಚಿತ್ರದ ನಿರ್ದೇಶಕ. ಗೌಸ್ ಪೀರ್ ಅವರ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಲಕ್ಕಿ ಚಿತ್ರಕ್ಕಿದೆ.(ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Actress Ramya has made it clear on her stand on the recent rumor that she is contesting elections to the Youth Congress President is rubbish. I am not moving away from cinema. I always want to travel in one boat. I am busy working with two films in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X