»   » ಹಳೆ ಜಿಂಕೆ ಮರಿನ ಸೆರೆಹಿಡಿದ ಬಾಸ್ ದರ್ಶನ್

ಹಳೆ ಜಿಂಕೆ ಮರಿನ ಸೆರೆಹಿಡಿದ ಬಾಸ್ ದರ್ಶನ್

Posted By:
Subscribe to Filmibeat Kannada

ಜಿಂಕೆಮರಿ ಹಾಡಿನಿಂದ ಒಂದು ಕಾಲದಲ್ಲಿ ಖ್ಯಾತಿಯಾಗಿದ್ದ ಹುಡುಗಾಟದ ಹುಡುಗಿ ರೇಖಾ ವೇದವ್ಯಾಸ್ , ಮತ್ತೆ ಕನ್ನಡದತ್ತ ಮುಖ ಮಾಡಿದ್ದು, ಛಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ಅಭಿನಯಿಸಲಿದ್ದಾರೆ. ದರ್ಶನ್ ಅವರ ಮುಂದಿನ ಚಿತ್ರ ಬಾಸ್ ನಲ್ಲಿ ಕುಣಿಯಲಿರುವುದು ಖಂಡಿತಾ.ಜಿಂಕೆಮರಿಯಂತೆ ಚಿತ್ರಾ, ತುಂಟಾಟದಲ್ಲಿ ಅಭಿನಯಿಸಿದ ರೇಖಾ ಅವರ ಜಿಂಕೆಮರಿ ಪಟ್ಟ ಇತ್ತೀಚಿನ ಯೋಗಿಶನ 'ಜಿಂಕೆ ಮರಿನಾ ..' ಹಾಡಿನಲ್ಲಿ ಕುಣಿದ ನಂದಿತಾಳ ಪಾಲಿಗಿರುವುದಂತೂ ನಿಜ ಎನ್ನುತ್ತದೆ ಗಾಂಧಿನಗರ.

ಕೇರಳದ ಸರಳ ಸುಂದರಿ ನವ್ಯಾ ನಾಯರ್ ಈಗಾಗಲೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ದರ್ಶನ್ ಜತೆಗಿನ 'ಗಜ ' ಚಿತ್ರ ಸೂಪರ್ ಹಿಟ್ ಆದ ಮೇಲೆ , ಸಹಜವಾಗಿ ಈ ಜೋಡಿ ಮತ್ತೊಂದು ಚಿತ್ರದಲ್ಲಿ ಮಿಂಚಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರ ಸೆಟ್ಟೇರಲಿದ್ದು, ತಕ್ಷಣವೇ ವಿದೇಶಕ್ಕೆ ಹಾರಲಿದೆ. ಜರ್ಮನಿ, ಆಸ್ಟ್ರೀಯಾದಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ರಮೇಶ್ ಯಾದವ್ ಹೇಳಿದರು.

ಕನ್ನಡದಲ್ಲಿ ಚಿತ್ರ, ಹುಡುಗಾಟಗಳಂತಹ ಹಿಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರೇಖಾ ನಂತರ ತಮಿಳು, ತೆಲುಗು ಚಿತ್ರಗಳಲ್ಲಿ ಬಿಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು, ಬ್ಯುಸಿಆಗಿದ್ದರು. ಈಗ ಕನ್ನಡಕ್ಕೆ ಮರಳುತ್ತಿರುವುದು ಒಳ್ಳೆಯ ಬೆಳವಣಿಗೆ. ಅಂದಹಾಗೆ, ಇವರ ಇತ್ತೀಚಿನ ನೆನಪಿರಲಿ ಪ್ರೇಮ್ ಜತೆಗಿನ ಗುಣವಂತ ಚಿತ್ರ ತೋಪೆದ್ದಿದ್ದಂತೂ ಸತ್ಯ..ದರ್ಶನ್ ಜತೆಗಾದರೂ ನೆಟ್ಟಗೆ ನಟಿಸಿ, ಯಶಸ್ಸು ಗಳಿಸಲಿ .

(ದಟ್ಸ್ ಸಿನಿವಾರ್ತೆ)

ಹಳೆ ಜಿಂಕೆಮರಿ ರೇಖಾಳ ಹೊಸ ಭಂಗಿಗಳ ಗ್ಯಾಲರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada