ಹುಡುಗ ಹುಡುಗಿ ನಟಿ ಸೌಮ್ಯಾಗೆ ಚಾಕುವಿನಿಂದ ಇರಿತ

By Rajendra

Attack on actress Sowmya
'ಹುಡುಗ ಹುಡುಗಿ' ಚಿತ್ರದಲ್ಲಿ ನಟಿಸಿದ್ದ ಸೌಮ್ಯಾ ಎಂಬ ನಟಿಗೆ ಆಕೆಯ ಬಾಯ್‌ಫ್ರೆಂಡ್ ಕಿರಣ್ ಕುಮಾರ್ ಚಾಕುವಿನಿಂದ ಇರಿದ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಕಿರಣ್‌ರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ ಎಂದು ಟಿವಿ9 ಸಂಜೆ ಸುದ್ದಿ 'ಜಸ್ಟ್ ಬೆಂಗಳೂರಿ'ನಲ್ಲಿ ಬಿತ್ತರಿಸಿದೆ.

ತೀವ್ರವಾಗಿ ಗಾಯಗೊಂಡಿರುವ ಸೌಮ್ಯಾ ಅವರನ್ನು ಚಿಕಿತ್ಸೆಗಾಗಿ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಎಸ್‌ಆರ್‌ಪಿ ಕಾನಿಸ್ಟೇಬಲ್ ಆಗಿ ಕಿರಣ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದರು. ಸೌಮ್ಯ ಅವರಿಗೆ ಚಾಕುವಿನಿಂದ ಕತ್ತು ಮತ್ತ್ತು ಹೊಟ್ಟೆಗೆ ಇರಿದಿದ್ದಾನೆ ಎನ್ನಲಾಗಿದೆ.

ಯಲಹಂಕದಲ್ಲಿ ಮಂಗಳವಾರ (ನ.28) ಮಧ್ಯಾಹ್ನ ಈ ಘಟನೆ ನಡೆದಿದೆ. ಹಣಕಾಸು ವಿಚಾರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಅದು ಹಲ್ಲೆಗೆ ದಾರಿ ಮಾಡಿಕೊಟ್ಟಿದೆ ಎಂಬ ಅನುಮಾನವನ್ನು ಟಿವಿ9 ವಾಹಿನಿ ವ್ಯಕ್ತಪಡಿಸಿದೆ. ಕಿರಣ್‌ಗೆ ಸೌಮ್ಯ ರು.3 ಲಕ್ಷ ಸಾಲ ಕೊಟ್ಟಿದ್ದರು ಎನ್ನುತ್ತವೆ ಮೂಲಗಳು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. (ಸುದ್ದಿ ಮೂಲ: ಟಿವಿ9)

More from Filmibeat

English summary
Kannada actress Sowmya attacked by her boy friend Kiran Kumar. She has been admitted to Hebbal Baptist hospital. She acted as junior artist in Kannada film Huduga Hudugi. Kiran allegedly slit her throat and stabbed her stomach. Yelahanka police has arrested him, tv9 Kannada sources said. More details are awaited.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X