ರಮ್ಯಾಗೆ ಅಭಿಮಾನಿಯಿಂದ ಪುಟ್ಟ ಉಡುಗೊರೆ

By Rajendra

ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಳಿಗೆ ಮೆಚ್ಚಿನಉಡುಗೊರೆಗಳನ್ನು ನೀಡುವುದು ವಾಡಿಕೆ. ಆದರೆ ಇಲ್ಲೊಬ್ಬ ಅಭಿಮಾನಿ ರಮ್ಯಾ ಹುಟ್ಟುಹಬ್ಬಕ್ಕೆ ವಿಡಿಯೋ ರೂಪದಲ್ಲಿ ಪುಟ್ಟ ಉಡುಗೊರೆಯನ್ನು ಅರ್ಪಿಸಿದ್ದಾರೆ. ಕಳೆದ ವರ್ಷ ಕೂಡ ಇವರು ಒಂದು ವಿಡಿಯೋ ಮಾಡಿದ್ದರು. ಅದನ್ನು ನೋಡಿದ ರಮ್ಯಾ ಪುಳಕಗೊಂಡು ಈ ಅಭಿಮಾನಿಯನ್ನು ಮನೆಗೆ ಕರೆಸಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಅಭಿಮಾನಿ ಮತ್ಯಾರು ಅಲ್ಲ, "ಮೋಹನ್ ಪುಟ್ಟಗವಿರಂಗಪ್ಪ". ಅವರು ತುಂಬು ಮುತುವರ್ಜಿಯಿಂದ, ರಮ್ಯಾ ಮೇಲಿನ ಅಪಾರ ಅಭಿಮಾನದಿಂದ ಈ ವಿಡಿಯೋವನ್ನು ರೂಪಿಸಿದ್ದಾರೆ. ಈ ವಿಡಿಯೋವನ್ನು ತಮ್ಮನೆಚ್ಚಿನ ತಾರೆ ರಮ್ಯಾ ಅವರಿಗೆ ಅರ್ಪಿಸಿದ್ದಾರೆ ಕೂಡ. ರಮ್ಯಾ ಅವರ ಬಗ್ಗೆ ಮೋಹನ್ ಅವರು ಏನಂತಾರೆ? ಅವರ ಮಾತುಗಳಲ್ಲೇ ಓದಿ...

ರಮ್ಯಾ ರವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿ "ಮೋಹನ್ ಪುಟ್ಟಗವಿರಂಗಪ್ಪ" ಅವರಿಂದ ಒಂದು ಚಿಕ್ಕ ಉಡುಗೊರೆ. ಗೋಲ್ಡನ್ ಗರ್ಲ್ ರಮ್ಯಾ ಅವರ ಜನುಮದಿನವಿಂದು (ನ.29). ಮೊದಲಿಗೆ ರಮ್ಯಾರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು . ದಕ್ಷಿಣ ಭಾರತದ ಜನಪ್ರಿಯ ನಟಿಯಾದ ರಮ್ಯಾ 1982 ನವೆಂಬರ್ 29 ರಂದು ಜನಿಸಿದರು, ರಮ್ಯಾಳ ನಿಜ ನಾಮಧೇಯ ದಿವ್ಯ ಸ್ಪಂದನ.

ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸಿದ "ಅಭಿ" ಚಿತ್ರದ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಎದುರಿಗೆ ನಾಯಕಿಯಾಗಿ ಉತ್ತಮ ನಟನೆಯ ಮೂಲಕ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾದರು. ಚಿತ್ರ ಹಿಟ್‌ ಆಗುವುದರೊಂದಿಗೆ ಗೋಲ್ಟನ್‌ ಗರ್ಲ್‌ ಖ್ಯಾತಿ ಗಳಿಸಿದ ರಮ್ಯಾ ಮತ್ತೆ ಹಿಂದೆ ನೋಡಲಿಲ್ಲ.

ಸುಮಾರು ಎಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತನ್ನ ಮನೋಜ್ಞನ ಅಭಿನಯದಿಂದಾಗಿ ನಂಬರ್ ಒನ್ ಸ್ಥಾನ ದಲ್ಲಿರುವ ರಮ್ಯಾ ಕನ್ನಡ ಚಿತ್ರಗಳ ಜೊತೆಜೊತೆಗೆ ತಮಿಳು ಮತ್ತು ತೆಲುಗು ಚಿತ್ರಗಳಲೂ ನಟಿಸಿ ಮನೆ ಮಾತಾಗಿದ್ದಾರೆ.

ಒಟ್ಟಾರೆಯಾಗಿ ಸ್ಯಾಂಡಲ್‍ವುಡ್‍ ಕ್ವೀನ್ ರಮ್ಯಾ ಅವರಿಗೆ ಸದಾ ಕಾಲ ಯಶಸ್ಸನ್ನೇ ಕಂಡು ಸದಾ ಸಂತೋಷದಿಂದಿರಲೆಂದು ಆಶಿಸುತ್ತಾ... ಅವರ ಹುಟ್ಟುಹಬ್ಬದ ಈ ಶುಭ ಸಂದರ್ಭದಲ್ಲಿ ಎಲ್ಲರೂ ರಮ್ಯಾರವರಿಗೆ ಶುಭಾಶಯ ಕೋರೋಣ...

More from Filmibeat

English summary
Golden girl Ramya"s beloved fan Mohan gave a small birthday gift to her. He sent a special video gift to actress Ramya. The entire video is his concept and also created by him. He says, this is dedicated to Ramya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X