For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರಗಳ ಸಂಖ್ಯೆಯಲ್ಲಿ 'ಚಿಂಗಾರಿ' ದಾಖಲೆ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಚಿಂಗಾರಿ' ಚಿತ್ರ ಮುಂದಿನ ತಿಂಗಳು ಫೆಬ್ರವರಿ 3, 2012ರಂದು ರಾಜ್ಯದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಒಟ್ಟೂ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿರುವ ಚಿಂಗಾರಿ ಚಿತ್ರ, ನ್ನೂ ಹೆಚ್ಚು ಚಿತ್ರಮಂದಿರಗಳನ್ನು ಪಡೆಯಲಿರುವುದು ಖಂಡಿತ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಹಾಗಾದರೆ ಕನ್ನಡ ಚಿತ್ರರಂಗದಲ್ಲಿ ದಾಖಲೆ ಸಂಖ್ಯೆಯಲ್ಲಿ ಬಿಡುಗಡೆ ಆಗುವ ಎಲ್ಲ ಲಕ್ಷಣಗಳೂ ಇವೆ.

  ದರ್ಶನ್ ಹಾಗೂ ಚಿಂಗಾರಿ 'ಹವಾ' ಇಡೀ ರಾಜ್ಯದ ತುಂಬಾ ಸುತ್ತುತ್ತಿದೆ. ಚಿಂಗಾರಿ ನಿರ್ಮಾಪಕರಾದ ಮಹಾದೇವ್ ಮತ್ತು ಮನು ಚಿತ್ರದ ಪ್ರಚಾರ ಕಾರ್ಯವನ್ನು ಸಾಕಷ್ಟು ವಿಭಿನ್ನ ರೀತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಚುರುಕಾಗಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಎಲ್ಲೆಲ್ಲೂ ಚಿತ್ರದ ವಾಲ್ ಪೋಸ್ಟರ್ಸ್ ಹಾಗೂ ಹೋರ್ಡಿಂಗ್ಸ್ ರಾರಾಜಿಸುತ್ತಿವೆ. ಜೊತೆಗೆ ಸಾರಥಿಯ ಯಶಸ್ಸಿನಿಂದ 'ಬಾಕ್ಸ್ ಆಫೀಸ್ ಸುಲ್ತಾನ್' ಎನಿಸಿರುವ ದರ್ಶನ್ ಈ ಚಿತ್ರದ ಕೇಂದ್ರ ಬಿಂದು.

  ಕೇವಲ ಹಾಡುಗಳು ಮಾತ್ರವಲ್ಲದೇ ಚಿಂಗಾರಿಯ ಕಥೆ ಕೂಡ ವಿದೇಶದಲ್ಲಿ ಚಿತ್ರೀಕರಣವಾಗಿದೆ. ಚಿತ್ರದ ಪ್ರೋಮೋ ನೋಡಿದ ಜನರಿಗೆ ಚಿಂಗಾರಿ ಸಾಕಷ್ಟು ಅದ್ದೂರಿಯಾಗಿ ಮೂಡಿ ಬಂದಿದೆ ಎಂಬುದು ತಿಳಿದಿದೆ. ಹೀಗಾಗಿ ಈ ಚಿತ್ರ ನೋಡಲು ಜನರು ಮುಗಿಬೀಳುವುದು ಖಂಡಿತ. ಇದೆಲ್ಲಾ ಕಾರಣಗಳಿಂದ ಸಿಕ್ಕಾಪಟ್ಟೆ ಥಿಯೇಟರ್ ಗಳಲ್ಲಿ ಚಿಂಗಾರಿ ಬಿಡುಗಡೆ ಆಗಲಿದ್ದು ದಾಖಲೆ ನಿರ್ಮಿಸಲಿದೆ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

  English summary
  Challenging Star Darshan movie Chingari Releases more than 150 theaters all over Karnataka as the present source is concerned.This may go to extend and create record in Sandalwood. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X