ನಟ ಧೃವ್ ಸರ್ಜಾ ಅದೃಷ್ಟದಾಟದ ಚಿತ್ರ ಅದ್ಧೂರಿ
ಕನ್ನಡ ಚಿತ್ರೋದ್ಯಮದಲ್ಲಿ ಮತ್ತೊಬ್ಬ ಯುವ ನಟ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಸೊದರಳಿಯ ಧೃವ ಸರ್ಜಾ ಹೀರೋ ಆಗಿ 'ಅದ್ದೂರಿ' ಚಿತ್ರದ ಮೂಲಕ ಎಂಟ್ರಿ ಕೊಡಲು ವೇದಿಕೆ ಸಿದ್ಧವಾಗಿದೆ.
ಸೋದರ ಮಾವನ ತರಹ ತಾನೂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆಂಬ ಧೃವ ಸರ್ಜಾ ಕನಸಿಗೆ ಈ ಚಿತ್ರ ಅಡಿಗಲ್ಲಾಗಲಿದೆ. ಅವರ ಪ್ರಯತ್ನಕ್ಕೆ ಪ್ರೇಕ್ಷಕರ ಬೆಂಬಲ ಎಷ್ಟರಮಟ್ಟಿಗೆ ಸಿಗಲಿದೆ ಎಂಬುದನ್ನು ಕಾದುನೋಡೋಣ.
ನೋಡಲು ದೃಢಕಾಯ, ಆಕ್ಷನ್ ಚಿತ್ರಗಳಿಗೆ ಹೇಳಿ ಮಾಡಿಸಿದ ಮೈಕಟ್ಟಿನ ಧ್ರುವ ಸರ್ಜಾ ಅಭಿನಯದ 'ಅದ್ದೂರಿ' ಚಿತ್ರವನ್ನು ಶಂಕರ್ ರೆಡ್ಡಿ ನಿರ್ಮಿಸಿದ್ದಾರೆ. ಎಪಿ ಅರ್ಜುನ್ ನಿರ್ದೇಶನ ಚಿತ್ರಕ್ಕಿದೆ. ರಾಧಿಕಾ ಪಂಡಿತ್ ಚಿತ್ರದನಾಯಕಿ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Action King Arjun Sarja's nephew Dhruv Sarja debut film Addhuri all set for release. The Kannada Movie is directed by AP Arjun, starring Dhruv Sarja
and Radhika Pandit in lead roles.


Click it and Unblock the Notifications











