twitter
    For Quick Alerts
    ALLOW NOTIFICATIONS  
    For Daily Alerts

    ಈ ವಾರದ ಚಿತ್ರಗಳ ಮೇಲೆ ವಾರೆನೋಟ

    By Mahesh
    |

    ದುನಿಯಾ ಸೂರಿ ನಿರ್ದೇಶನದ ಜಾಕಿ ಚಿತ್ರದಲ್ಲಿರುವ ಡಾನ್ಸ್, ಲೋಕೆಷನ್, ಸ್ಕ್ರಿನ್ ಪ್ಲೇ, ನಟನೆ ಮುಂತಾದ 'ಪವರ್' ಫುಲ್ ಪ್ಲಸ್ ಅಂಶಗಳ ಕಾರಣ ವಾರದಿಂದ ವಾರಕ್ಕೆ ಗಳಿಕೆ ಹೆಚ್ಚಿಸುತ್ತಲೇ ಇದೆ. ಸುಮಾರು 127 ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷಿಯಾ, ಸಿಂಗಪುರ, ಜರ್ಮನಿ ಮುಂತಾದ ದೇಶಗಳಲ್ಲಿ ಬೇಡಿಕೆ ಹುಟ್ಟಿಕೊಂಡಿದೆ. ಪುನೀತ್, ಭಾವನಾ ಜೋಡಿ ಎಲ್ಲರ ಮನಗೆದ್ದಿದೆ.

    ಪಂಚರಂಗಿಯ ಪಂಚಿಂಗ್ ಡೈಲಾಗ್ ಗಳು, ಕರಾವಳಿ ಮನೆಗಳು, ಬೀಚ್ ಗಳು, ಕಥೆ ಇರದ ಸಮಯವ್ಯರ್ಥ ಆಲಾಪನೆಗಳನ್ನೇ ಜನ ಮೆಚ್ಚಿಕೊಂಡು ಮೊದಲ ವಾರವೇ ಭಟ್ಟರಿಗೆ ಹಾಕಿದ ದುಡ್ಡು ವಾಪಾಸ್ ಕೊಡಿಸಿದ್ದಾರೆ. ಈಗಲೂ 20 ಚಿತ್ರಮಂದಿರಗಳಲ್ಲಿ ಪಂಚರಂಗಿ ರಂಗು ತುಂಬಿದ್ದು, 50 ದಿನ ದಾಟಿದ ಸಾಧನೆ ಮೆರೆದಿದೆ. ಸುದೀಪ್, ರಮ್ಯಾ ಅಭಿನಯದ ಕಿಚ್ಚ ಹುಚ್ಚ ಭರ್ಜರಿ ಅಲ್ಲದಿದ್ದರೂ ಸಾಧಾರಣ ಓಪನಿಂಗ್ ಪಡೆದು 70 ಕೇಂದ್ರಗಳಲ್ಲಿ ಮುನ್ನೆಡೆ ಕಾಯ್ದುಕೊಂಡಿದೆ.

    ಚಿತ್ರಗಳ ಹಬ್ಬದ ಸಾಲು :ರಾಜ್ಯೋತ್ಸವ, ದೀಪಾವಳಿ ಸೀಸನ್ ಶುರುವಾಗುವ ಮುನ್ನ ನಾಲ್ಕು ಸಿನಿಮಾಗಳು ತೆರೆಗೆ ಅಪ್ಪಳಿಸಿವೆ. ಅದರಲ್ಲಿ ಅಂಬರೀಷ್, ಸುದೀಪ್, ಐಂದ್ರಿತಾ ರೇ ಅಭಿನಯದ 'ವೀರ ಪರಂಪರೆ' ಮುಖ್ಯವಾದದ್ದು. ಕಾರಣ, ಬಹುದಿನಗಳ ನಂತರ 'ಕಲಾ ಸಾಮ್ರಾಟ್' ಎಸ್ ನಾರಾಯಣ್ ಆವರು ಸ್ವಂತ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.

    ಉಳಿದಂತೆ ಯಕ್ಷ, ಗಾನ ಬಜಾನ, ಗುಂಡ್ರಗೋವಿ ಕೂಡಾ ಹಾಗೂ ಹೀಗೂ ಚಿತ್ರಮಂದಿರ ಗಿಟ್ಟಿಸಿಕೊಂಡು ತೆರೆಯಲ್ಲಿ ರಾರಾಜಿಸುತ್ತಿವೆ. ನಾಲ್ಕು ಚಿತ್ರಗಳ ಮೇಲೆ ಹೂಡಿರುವ ಸುಮಾರು 12 ಕೋಟಿ ರು ಭವಿಷ್ಯವನ್ನು ಪ್ರೇಕ್ಷಕ ಪ್ರಭುಗಳು ಸದ್ಯದಲ್ಲೇ ನಿರ್ಧರಿಸಲಿದ್ದಾರೆ.

    ಯಕ್ಷ ಚಿತ್ರ ಲೂಸ್ ಮಾದ ಯೋಗೀಶ್ ಅವರ ತಂದೆ ಸಿದ್ದರಾಜು ಅವರ ಸ್ವಂತ ಬ್ಯಾನರ್ ನ ಎರಡನೇ ಚಿತ್ರ. ಮೊದಲ ಚಿತ್ರ ದುನಿಯಾದ ಕಥೆ ಎಲ್ಲರಿಗೂ ಗೊತ್ತಿದೆ. ಈ ಯಕ್ಷನಿಗೆ ಅತುಲ್ ಕುಲಕರ್ಣಿ, ನಾನಾ ಪಾಟೇಕರ್ ರಂಥ ಉತ್ತಮ ಕಲಾವಿದರ ಸಾಥ್ ಇದೆ. ಅನೂಪ್ ಸೀಳನ್ ಸಂಗೀತದ ಒಂದೆರಡು ಹಾಡು ಈಗಾಗಲೇ ಪಡ್ಡೆಗಳ ಬಾಯಲ್ಲಿ ನಲಿದಾಡುತ್ತಿದೆ.

    ಸಂಗೀತಮಯ ಗಾನ ಬಜಾನ: ಹಾಡು ಕುಣಿತ, ಯುವಪೀಳಿಗೆಯಲ್ಲಿನ ಆಕರ್ಷಣೆ, ಪ್ರೀತಿ ಇದೇ ಕಥಾವಸ್ತುವಿನ ಚಿತ್ರವನ್ನು ಪ್ರಶಾಂತ್ ರಾಜ್ ತೆರೆಗೆ ತಂದಿದ್ದಾರೆ. ನಾಯಕ ತರುಣ್ ಚಂದ್ರರಿಗಂತೂ ಚಿತ್ರ ಗೆಲ್ಲಲೇ ಬೇಕಾಗಿದೆ. ರಾಧಿಕಾ ಪಂಡಿತ್ ಟಪೋರಿ ಹುಡ್ಗಿ ಪಾತ್ರ, ದಿಲೀಪ್ ರಾಜ್ ರೌಡಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಜೋಶ್ವ ಶ್ರೀಧರ್ ಮತ್ತೊಮ್ಮೆ ಮ್ಯೂಸಿಕ್ ನಲ್ಲಿ ಮ್ಯಾಜಿಕ್ ಮಾಡಿದ್ದಾರೆ.

    ಆ ದಿನಗಳು ಚಿತ್ರದ ಮೂಲಕ ಬೆಳಕಿಗೆ ಬಂದ ರಂಗಭೂಮಿ ಪ್ರತಿಭೆ ಶಂಕರ್ ಬಾಬು ಅಲಿಯಾಸ್ ಸತ್ಯರಿಗೆ ನಾಯಕನಾಗಿ 'ಗುಂಡ್ರಗೋವಿ' ಮೊದಲ ಚಿತ್ರ. ನಟನೆ, ಫೈಟಿಂಗ್ ನಲ್ಲಿ ತರಬೇತಿ ಹೊಂದಿರುವ ಈ ಕಲಾವಿದನಿಗೆ ಹೀರೋ ಆಗಿ ಮೆರೆಯಲು ಈ ಚಿತ್ರದ ಗೆಲುವು ಅಗತ್ಯ. ಕನ್ನಡದಲ್ಲಿ ರೆಹಮಾನ್ ಗರಡಿಯ ಫೀನಿಕ್ಸ್ ರಾಜನ್ ಗೆ ಸಂಗೀತ ನಿರ್ದೇಶಕನಾಗಿ ಮೊದಲ ಅವಕಾಶ. ತಾರೇಶ್ ರಾಜ್ ನಿರ್ದೇಶನ ಈ ಚಿತ್ರಕ್ಕಿದೆ.

    ಮುಂದಿನ ಬದಲಾವಣೆ: ಇಷ್ಟೆ ಅಲ್ಲ ಮುಂಬರುವ ಎರಡು ವಾರಗಳಲ್ಲಿ ಗಣೇಶ್, ಪ್ರಿಯಾಯಣಿಯ 'ಏನೋ ಒಂಥರಾ', ವಿಶ್ವಾಸ್, ದೀಪಿಕಾರ 'ಕಾಲ್ಗೆಜ್ಜೆ', ವಾಸು ಗ್ಯಾಂಗ್ ನ 5 ಈಡಿಯಟ್ಸ್ , ರಮೇಶ್ ಅರವಿಂದ್ 'ಶಾಕ್', 'ರಂಗಪ್ಪ ಹೋಗ್ಬಿಟ್ನಾ', ರವಿಚಂದ್ರನ್, ನಿಖಿತಾರ 'ನಾರಿಯ ಸೀರೆ ಕದ್ದ ' ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಹಬ್ಬದ ಖುಷಿಯಲ್ಲಿ ಒಂದರಹಿಂದೆ ಒಂದು ಚಿತ್ರಗಳು ಬರುತ್ತಿರುವುದು ಪ್ರೇಕ್ಷಕರಿಗೆ ಹಬ್ಬವಾದರೂ ನಿರ್ಮಾಪಕರಿಗೆ ಕಷ್ಟ ಕಷ್ಟ.


    ವಿಡಿಯೋಗಳು:
    .ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
    ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

    Friday, October 29, 2010, 12:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X