For Quick Alerts
  ALLOW NOTIFICATIONS  
  For Daily Alerts

  ಲಿಮ್ಕಾ ದಾಖಲೆಗೆ 'ಸತ್ಯ ಇನ್ ಲವ್' ಬೆಡಗಿ ಜೆನಿಲಿಯಾ

  By Rajendra
  |

  ಇತ್ತೀಚೆಗಷ್ಟೇ ಗೃಹಸ್ಥಾಶ್ರಮ ಪ್ರವೇಶಿಸಿದ ತಾರೆ ಜೆನಿಲಿಯಾ ಡಿಸೋಜಾ ಈಗ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ. ಪ್ರತಿಷ್ಠಿತ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌'ನಲ್ಲಿ ಸ್ಥಾನ ಪಡೆದಿದ್ದಾರೆ. ಇಷ್ಟಕ್ಕೂ ಜೆನಿಲಿಯಾ ಏನಂತಹ ಘನಂದಾರಿ ಸಾಧನೆ ಏನು ಮಾಡಿದರು ಅಂತೀರಾ?

  ಒಂದೇ ವರ್ಷದಲ್ಲಿ ನಾಲ್ಕು ಭಾಷೆಗಳಲ್ಲಿ ಅಭಿನಯದ ನಾಲ್ಕು ಚಿತ್ರಗಳು ಹಿಟ್ ಆಗಿರುವುದೇ ಜೆನಿಲಿಯಾರ ಸಾಧನೆ. ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಒಂದೇ ವರ್ಷದಲ್ಲಿ ತೆರೆಕಂಡ ನಾಲ್ಕು ಚಿತ್ರಗಳು ಜಯಭೇರಿ ಬಾರಿಸಿವೆ. ಕನ್ನಡದಲ್ಲಿ 'ಸತ್ಯ ಇನ್ ಲವ್', ಸಂತೋಷ್ ಸುಬ್ರಮಣಿಯಂ (ತಮಿಳು), ರೆಡಿ (ತೆಲುಗು) ಹಾಗೂ ಜಾನೇ ತು ಜಾನೆ ನಾ (ಹಿಂದಿ) ಈ ನಾಲ್ಕು ಚಿತ್ರಗಳು 2008ನೇ ಸಾಲಿನಲ್ಲಿ ತೆರೆಕಂಡಿದ್ದವು.

  ಜೆನಿಲಿಯಾ ಡಿಸೋಜಾ ಹಾಗೂ ತಮ್ಮ ಪತಿ ರಿತೇಶ್ ದೇಶ್‌ಮುಖ್ ಮುಖ್ಯಭೂಮಿಕೆಯಲ್ಲಿರುವ 'ತೇರೆ ನಾಲ್ ಲವ್ ಹೋ ಗಯಾ' ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದಲ್ಲಿನ ಜೆನಿಲಿಯಾ ಅಭಿನಯದ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. (ಏಜೆನ್ಸೀಸ್)

  English summary
  Actress Genelia D'souza enters in the prestigious Limca Book of World Records for delivering four hits in four different languages in one year! Her 'Satya In Love' (Kannada), 'Santosh Subramaniam' (Tamil), 'Ready' (Telugu) and 'Jaane Tu Ya Jaane Na' (Hindi) - four super hit offerings in 2008

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X