ಬಾಲಿವುಡ್‌ಗೆ ಜಾಕಿ ಜಾಕಿ ಜಾಕಿ ಬೆಡಗಿ ಭಾವನಾ

By Rajendra

ಪುನೀತ್ ಜೊತೆ ಜಾಕಿ ಜಾಕಿ ಜಾಕಿ...ಎಂದು ಪ್ರೇಕ್ಷಕರನ್ನು ಮೈಮರೆಸಿದ್ದ ಮಲ್ಲು ಬೆಡಗಿ ಭಾವನಾ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಮಲಯಾಳಂ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ಭಾವನಾ ಪ್ರೇಕ್ಷಕರ ಮನಗೆದ್ದಿದ್ದು ಈಗ ಬಾಲಿವುಡ್‌ನ ಹೃದಯ ಕದಿಯಲು ಮುಂದಾಗಿದ್ದಾರೆ.

ಭಾಮನಾಗೆ ಬಾಲಿವುಡ್ ಮೊದಲ ಚಿತ್ರದಲ್ಲೆ ಸೀರಿಯಲ್ ಕಿಸ್ಸರ್ (ಕಿಲ್ಲರ್ ಅಲ್ಲ) ಇಮ್ರಾನ್ ಹಸ್ಮಿ ಜೊತೆ ನಟಿಸುವ ಸೌಭಾಗ್ಯ ಸಿಕ್ಕಿರುವುದು ಆಕೆಯ ಯಾವ ಜನ್ಮದ ಪುಣ್ಯವೋ ಏನೋ!? ಚಿತ್ರಕ್ಕೆ ಸಹಿ ಹಾಕುವ ಮುನ್ನ ಒಮ್ಮೆ ಚಿತ್ರಕತೆ ಮೇಳೆ ಕಣ್ಣಾಡಿಸುತ್ತಿದ್ದಾರೆ ಭಾವನಾ.

ಇಮ್ರಾನ್ ಹಸ್ಮಿ ಚಿತ್ರ ಎಂದರೆ ಹೇಳಬೇಕೆ ಒಂಚೂರು ಬಿಚ್ಚಾಟ, ಮೈಮಾಟ ಇದ್ದೇ ಇರುತ್ತದೆ. ಸಾಲದಕ್ಕೆ ಚಿತ್ರಕತೆ ಕೂಡ ಈ ರೀತಿಯ ಸನ್ನಿವೇಶಗಳನ್ನು ಬಯಸುತ್ತದಂತೆ. ಇದೆಲ್ಲವನ್ನೂ ಸ್ಟಡಿ ಮಾಡಿ ಚಿತ್ರಕ್ಕೆ ಸಹಿ ಹಾಕುವುದಾಗಿ ಭಾವನಾ ತಿಳಿಸಿದ್ದಾರೆ. ಭಾವನಾ ಅವರಿಗೆ ತುಂಬಾ ಮಡಿವಂತಿಕೆ ಏನೂ ಇಲ್ಲವಂತೆ. ಅಲ್ಪ ಸ್ವಲ್ಪ ಎಕ್ಸ್‌ಫೋಸ್‌ ಆದರೆ ಓಕೆ ಎನ್ನುವ ಮೂಡ್‌ನಲ್ಲಿದ್ದಾರೆ.

ಸದ್ಯಕ್ಕೆ ಕನ್ನಡದ ಎರಡು ಚಿತ್ರಗಳಲ್ಲಿ ಭಾವನಾ ಬ್ಯುಸಿಯಾಗಿದ್ದಾರೆ. ಒಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಶೈಲೂ ಹಾಗೂ ಮತ್ತೊಂದು ಚಿತ್ರ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ವೀರ ವಿಷ್ಣುವರ್ಧನ. ಇವೆರಡೂ ಚಿತ್ರಗಳು ಸಾಕಷ್ಟು ಕುತೂಹಲವನ್ನೂ ಕೆರಳಿಸಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada films actress Bhavana will soon making her debut in Bollywood. Earlier she acted with Puneet Rajkumar in Jackie and also she is acting in Veera Vishnuvardhana and Shyloo. As per the sources she is going to pair up with serial kisser Emraan Hashmi and now she is busy in reading the scripts for her upcoming Bollywood movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X