ಅಕ್ಟೋಬರ್ 15ಕ್ಕೆ ಪುನೀತ್ Vs ಸುದೀಪ್ ಬಿಗ್ ಫೈಟ್!

By Rajendra

ಕನ್ನಡ ಚಿತರಂಗದಲ್ಲಿ ಈ ರೀತಿಯ ಒಂದು ಪ್ರಸಂಗ ಎದುರಾದದ್ದು ಬಲು ಅಪರೂಪ ಎನ್ನಬೇಕು. ಇಬ್ಬರು ಸೂಪರ್ ಸ್ಟಾರ್‌ಗಳ ಚಿತ್ರ ಒಂದೇ ದಿನ ಬಿಡುಗಡೆಯಾದರೆ ಹೇಗಿರುತ್ತೆ!? ಅಂತಹ ಒಂದು ಅಪರೂಪದ ವಿದ್ಯಮಾನ ಅಕ್ಟೋಬರ್ 15ರಂದು ಕನ್ನಡ ಚಿತ್ರರಂಗದಲ್ಲಿ ನಡೆಯಲಿದೆ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಚಿತ್ರಗಳು ಒಂದೇ ದಿನ ತೆರೆಗೆ ಅಪ್ಪಳಿಸುತ್ತಿವೆ. ಈಗಾಗಲೆ ಹಾಡುಗಳ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ, ಪ್ರೇಕ್ಷಕರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿರುವ 'ಜಾಕಿ' ಚಿತ್ರ ಅಕ್ಟೋಬರ್ 15ಕ್ಕೆ ತೆರೆಗೆ ಬರುತ್ತಿದೆ.

ಅಂದೇ ಸುದೀಪ್ ಅಭಿನಯದ 'ಕಿಚ್ಚ ಹುಚ್ಚ' ಚಿತ್ರವೂ ಬಿಡುಗಡೆಯಾಗುತ್ತಿದೆ. ಸುದೀರ್ಘ ಸಮಯದ ಬಳಿಕ ಬಿಡುಗಡೆಯಾಗುತ್ತಿರುವ ಈ ಚಿತ್ರದ ಬಗ್ಗೆಯೂ ಪ್ರೇಕ್ಷಕರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಒಟ್ಟಿಗೆ ಎರಡು ಚಿತ್ರಗಳು ಬಿಡುಗಡೆಯಾಗುವ ಮೂಲಕ ತೀವ್ರ ಸ್ಪರ್ಧೆ ಎದುರಾಗಿದೆ.

ಮೂಲಗಳ ಪ್ರಕಾರ 'ಜಾಕಿ' ಚಿತ್ರ ಅಕ್ಟೋಬರ್ 14ರಂದು ಬಿಡುಗಡೆಯಾಗಬೇಕಿತ್ತು. ಅನಿವಾರ್ಯ ಕಾರಣಗಳಿಂದ 'ಜಾಕಿ' ಚಿತ್ರ ಒಂದು ದಿನ ಮುಂದೂಡಲ್ಪಟ್ಟು ಅಕ್ಟೋಬರ್ 15ಕ್ಕೆ ತೆರೆಗೆ ಬರುತ್ತಿದೆ. 'ಕಿಚ್ಚ ಹುಚ್ಚ' ಚಿತ್ರವನ್ನು ಅಕ್ಟೋಬರ್ 15ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರದ ನಿರ್ಮಾಪಕ ಕೆ ಮಂಜು ಅವರು ಮುಂಚಿತವಾಗಿಯೇ ಪ್ರಕಟಿಸಿದ್ದರು.

ಬೆಂಗಳೂರಿನ ಮುಖ್ಯ ಚಿತ್ರಮಂದಿರಗಳಾದ ಸಂತೋಷ್ ಸೇರಿದಂತೆ ಹಲವಾರು ಚಿತ್ರಮಂದಿರಗಳಲ್ಲಿ 'ಕಿಚ್ಚ ಹುಚ್ಚ' ತೆರೆಕಾಣುತ್ತಿದ್ದರೆ ನರ್ತಕಿ ಚಿತ್ರಮಂದಿರದಲ್ಲಿ 'ಜಾಕಿ' ನರ್ತನ ಮಾಡಲಿದೆ. ಕಿಚ್ಚ ಹುಚ್ಚ ಚಿತ್ರ ತಮಿಳಿನ 'ಚಿತ್ತಿರಂ ಪೆಸುತಾಡಿ' ರೀಮೇಕ್. ಆದರೆ ಸೂರಿ ನಿರ್ದೇಶನದ 'ಜಾಕಿ' ಚಿತ್ರ ಸ್ವಮೇಕ್ ಚಿತ್ರವಾಗಿದೆ. ಪ್ರೇಕ್ಷಕರು ಎತ್ತ ವಾಲುತ್ತಾರೋ ಕಾದು ನೋಡಬೇಕು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X