ಕ್ಯಾಲೆಂಡರ್ ಬೆಡಗಿ ಹರಿಪ್ರಿಯಾಗೆ ಹ್ಯಾಪಿ ಬರ್ತ್‌ಡೇ

By Rajendra

Actress Haripriya
ನಟಿ ಹರಿಪ್ರಿಯಾ ಅವರಿಗೆ ಶನಿವಾರ (ಅ.28) ಬರ್ತ್‌ಡೇ ಸಂಭ್ರಮ. ಈಕೆ ಹುಟ್ಟಿದ್ದು ಬೆಂಗಳೂರಿನಿಂದ ಸರಿಸುಮಾರು 56 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ. ಹರಿಪ್ರಿಯಾ ಮೂಲ ಹೆಸರು ಶ್ರುತಿ. ಇಂದು ಆಕೆ ತಮ್ಮ 26ನೇ ಹುಟ್ಟುಹಬ್ಬವನ್ನು ತಮ್ಮ ಫ್ರೆಂಡ್ಸ್ ಹಾಗೂ ಕುಟುಂಬವರ್ಗದವರೊಂದಿಗೆ ಆಚರಿಸಿಕೊಳ್ಳಲಿದ್ದಾರೆ.

ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ ಹರಿಪ್ರಿಯಾ. ಚಿತ್ರದ ಹೆಸರು 'ಕಿಲಾಡಿ ಕಿಟ್ಟಿ'. ನಾಯಕ ನಟ ಶ್ರೀನಗರ ಕಿಟ್ಟಿ. ಈಕೆ ಅಭಿನಯದ ತೆಲುಗು ಚಿತ್ರ 'ಪಿಲ್ಲ ಜಮೀನ್ದಾರ್' ಹಾಗೂ ತಮಿಳೀನ 'ಮುರನ್‍‌' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ಹರಿಪ್ರಿಯಾ ಕೈಯಲ್ಲಿ ಕ್ಯಾಲೆಂಡರ್, ಸಾಗರ್, ನಂದೇ, ಸೂಪರ್ ಶಾಸ್ತ್ರಿ ಚಿತ್ರಗಳಿವೆ.

'ಕಿಲಾಡಿ ಕಿಟ್ಟಿ' ಚಿತ್ರದ ಸೆಟ್ಸ್‌ನಲ್ಲೆ ಅಡ್ವಾನ್ಸ್‌ಡ್ ಬರ್ತ್‌ಡೇ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ಹರಿಪ್ರಿಯಾ ಅವರ ಪ್ರಕಾರ ಅವರು ಹುಟ್ಟಿದ್ದು 1991ರಲ್ಲಂತೆ. ಈ ಪ್ರಕಾರ ಅವರ ವಯಸ್ಸು ಇನ್ನೂ 20ರ ಹರೆಯ. ಸಿನಿಮಾ ತಾರೆಯರ ವಯಸ್ಸು, ಸಂಬಳ ಎರಡೂ ಕೇಳಬಾರದು ಎಂಬುದು ಲೇಟೆಸ್ಟ್ ಗಾದೆ. ಹಾಗಾಗಿ ಹರಿಪ್ರಿಯಾ ಹೇಳಿದ್ದನ್ನು ನಂಬೋಣ. ಹ್ಯಾಪಿ ಬರ್ತ್‌ಡೇ ಟು ಹರಿಪ್ರಿಯಾ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada actress Haripriya celebrating her birthday on Saturday, 29th October 2011 with her family and friends. Haripriya was born as Shruthi in Chikballapur, Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X