»   » ದ್ವಿತೀಯ ಹಂತದ ಚಿತ್ರೀಕರಣದಲ್ಲಿ 'ಜೋಶ್'

ದ್ವಿತೀಯ ಹಂತದ ಚಿತ್ರೀಕರಣದಲ್ಲಿ 'ಜೋಶ್'

Posted By:
Subscribe to Filmibeat Kannada

ಪದವಿ ಕಾಲೇಜುಗಳು ಆರಂಭವಾಗುತ್ತಿರುವ ಸಮಯ. ಆರಂಭದ ದಿನ ಹುಡುಗರಲ್ಲಿ ಎಲ್ಲಿಲ್ಲದ ಉತ್ಸಾಹ. ಆ ವರ್ಷ ಬಂದವರು ಹೊಸ ಗೆಳೆತನದ ಅನ್ವೇಷಣೆಯಲ್ಲಿದ್ದರೆ ಹಳೇ ವಿದ್ಯಾರ್ಥಿಗಳಿಗೆ ಗೆಳೆಯರನ್ನು ಕಾಣುವ ಸಡಗರ. ರಾಕೇಶ್(ನಾಯಕ) ಪೂರ್ಣ(ನಾಯಕಿ) ಹಾಗೂ ಸ್ನೇಹಿತರಾದ ವಿಷ್ಣುಪ್ರಸನ್ನ, ಅಲೋಕ್, ಅಕ್ಷಯ್, ಅಮಿತ್, ಜಗನ್, ಸ್ನೇಹ, ತಬಲನಾಣಿ, ರೋಬೊಗಣೇಶ್, ಜೈಶಂಕರ್ ಕಾಲೇಜು ತೆರೆಯುವ ದಿನದ ಸಂತಸವನ್ನು ಅನುಭವಿಸುತ್ತಾರೆ 'ಜೋಶ್' ಚಿತ್ರದಲ್ಲಿ. ಇದು ನೂತನ ನಾಯಕರ ಪರಿಚಯದ ದೃಶ್ಯ ಕೂಡ.

ತುಮಕೂರು ರಸ್ತೆಯ ಆಚಾರ್ಯ ಕಾಲೇಜಿನಲ್ಲಿ ಚಿತ್ರೀಕೃತವಾದ ಈ ಸನ್ನಿವೇಶದಲ್ಲಿ 200 ಕ್ಕೂ ಹೆಚ್ಚು ಸಹಕಲಾವಿದರು ಭಾಗವಹಿಸಿದ್ದರು. ಮೊದಲ ಹಂತದ ಚಿತ್ರೀಕರಣವನ್ನು ಸರಾಗವಾಗಿ ಮುಗಿಸಿದ ಈ ಚಿತ್ರಕ್ಕೆ ಈಗ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಿದೆ.

ಎಸ್.ವಿ.ಬಾಬು ಅವರ ಪುತ್ರ ಎಸ್.ಸಂಜಯ್‌ಬಾಬು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಿವಮಣಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ವರ್ಧನ್ ಸಂಗೀತ, ಬಿ.ಎ.ಮಧು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಕಲೆ, ನಾಗೇಂದ್ರಪ್ರಸಾದ್, ಕವಿರಾಜ್, ಹೃದಯಶಿವ ಹಾಗೂ ಆನಂದ್ ಗೀತರಚನೆ, ರವಿವರ್ಮ, ಜಾಲಿಬಾಸ್ಟಿನ್ ಸಾಹಸ, ಸ್ಟಾನ್ಲಿ ಡಿ ಕೋಸ್ಟಾ, ನೋಬಲ್, ಬೃಂದಾ ನೃತ್ಯ, ಮೈಸೂರ್ ಕೃಷ್ಣ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಕೇಶ್, ವಿಷ್ಣುಪ್ರಸನ್ನ, ಅಕ್ಷಯ್, ಅಲೋಕ್, ಅಮಿತ್, ಜಗನ್ನಾಥ್, ಪೂರ್ಣ, ಸ್ನೇಹ, ಚೇತನ್, ಕರಿಬಸವಯ್ಯ, ರೋಮಗಣೇಶ್, ಮಂಡ್ಯರಮೇಶ್, ತುಳಸಿಶಿವಮಣಿ, ಸುಧಾಬೆಳವಾಡಿ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಜೋಶ್‌ನಲ್ಲಿ ಲಂಡನ್ ಬೆಡಗಿ ನವನಟರ ನರ್ತನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada