»   » ಪಿಯುಸಿ,'ಧಿಮಾಕು' ತೆರೆಗೆ ಬರಲು ಸಿದ್ದ

ಪಿಯುಸಿ,'ಧಿಮಾಕು' ತೆರೆಗೆ ಬರಲು ಸಿದ್ದ

Posted By:
Subscribe to Filmibeat Kannada

ಎಸ್.ಆರ್.ಬ್ರದರ್ಸ್ ನಿರ್ದೇಶನದ ಪಿ ಯು ಸಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಉತ್ತಮ ಸಂದೇಶ ನೀಡುವ ಚಿತ್ರ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಹದಿಹರೆಯದ ವಯಸ್ಸಿನವರ ಜವಾಬ್ದಾರಿಗಳ ಬಗ್ಗೆ ದೃಷ್ಠಿಹಾಯಿಸಿರುವ ನಿರ್ದೇಶಕರು ಚಿತ್ರವನ್ನು ಶೀಘ್ರದಲೇ ತೆರೆಯಮೇಲೆ ತರುವ ಪ್ರಯತ್ನದಲಿದ್ದಾರೆ.

ಅಭಯಜ್ಯೋತಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣೇಗೌಡ ಬಿ ಪಾಟೀಲ್ ನಿರ್ಮಿಸಿ, ಎಸ್.ಆರ್.ಬ್ರದರ್ಸ್ ಕತೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ ಪಿ ಯು ಸಿ ಕನಸಿನ ಖಜಾನೆ. ಹಂಸಲೇಖ ಅವರ ಶಿಷ್ಯ ರವಿರಾಜ್ ಈ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಸುರೇಶ್‌ಬಾಬು ಛಾಯಾಗ್ರಹಣ, ಪ್ರಕಾಶ್ ಸಂಕಲನ, ಮದನ್‌ಹರಿಣಿ, ಚಿನ್ನಿಪ್ರಕಾಶ್ ನೃತ್ಯ, ರವಿವರ್ಮ ಸಾಹಸ, ಸೋಮನಾಥ್

ಸಹನಿರ್ದೇಶನ, ಕೆ.ವಿ.ಮಂಜಯ್ಯ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್‌ಚಂದ್ರ, ಹರ್ಷಿಕಾಪೂರ್ಣಚ್ಚ, ಚರಿಷ್ಮಾ, ಅವಿನಾಶ್, ವಿನಯಾಪ್ರಕಾಶ್, ರಾಮಕೃಷ್ಣ, ಸಾಧುಕೋಕಿಲಾ ಮುಂತಾದವರಿದ್ದಾರೆ.

******
ಧಿಮಾಕು

ಶ್ರೀಅಂಬಿಕಾ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಧಿಮಾಕು ಚಿತ್ರಕ್ಕೆ ಪ್ರಥಮಪ್ರತಿ ಸಿದ್ದವಾಗಿದ್ದು ಸದ್ಯದಲೇ ಸೆನ್ಸಾರ್ ಮಂಡಲಿ ಚಿತ್ರವನ್ನು ವೀಕ್ಷಿಸಲಿದೆ ಎಂದು ನಿರ್ಮಾಪಕಿ ಶ್ರೀಮತಿ ಪುಷ್ಪಾಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

ನಾಯಕ ನವೀನ್‌ಕೃಷ್ಣ ವಿನೂತನ ಶೈಲಿಯಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರವನ್ನು ಮಗೇಶ್‌ಕುಮಾರ್ ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ. ನಾಯಕನಗಷ್ಟೇ ಅಲ್ಲದೇ ನವೀನ್‌ಕೃಷ್ಣ ನಿರ್ದೇಶಕರೊಡನೆ ಕತೆ, ಚಿತ್ರಕತೆ ರಚಿಸುವಲೂ ನೆರವಾಗಿದ್ದಾರೆ. ಅರ್ಜುನ್ ಸಂಗೀತವಿರುವ ಈ ಚಿತ್ರಕ್ಕೆ ವಿನೋದ್ ಅವರ ಛಾಯಾಗ್ರಹಣವಿದೆ. ಶಂಕರ್ ಬಿಲ್ಲೇಮನೆ ಸಂಭಾಷಣೆ, ಡಿಫ಼ರೆಂಟ್‌ಡ್ಯಾನಿ ಸಾಹಸ, ಹೊಸ್ಮನೆ ಮೂರ್ತಿ ಕಲೆ ಹಾಗೂ ಶಾಸ್ತ್ರಿ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ನವೀನ್‌ಕೃಷ್ಣ, ಮಯೂರಿ, ಅಕ್ಷ, ರಂಗಾಯಣರಘು, ಸುಧಾಬೆಳವಾಡಿ, ಗಿರಿ, ವಿಶಾಲ್‌ರಾಘವೇಂದ್ರ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada