ಕೃಷ್ಣನ್ ಲವ್ ಸ್ಟೋರಿ ಯಶಸ್ಸಿಗೆ ಕಾರಣ ಗೊತ್ತೇ?
ಸತತ ರಿಮೇಕ್ ಚಿತ್ರಗಳ ಹಾವಳಿ ಹಾಗೂ ಡಬ್ಬದಿಂದ ಮೇಲೇಳದ ಚಿತ್ರಗಳ ನಡುವೆ ಸ್ವಂತಿಕೆ ಚಿತ್ರ ಕೃಷ್ಣನ್ ಲವ್ ಸ್ಟೋರಿ ತಕ್ಕಮಟ್ಟಿಗೆ ಯಶಸ್ಸು ಗಳಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಆಶಾದಾಯಕ ಸಂಗತಿಯಾಗಿದೆ.
ಸದಭಿರುಚಿಯ ಚಿತ್ರಗಳ ಪ್ರದರ್ಶನ ಹಾಗೂ ಸಂವಾದ ಚರ್ಚೆ ನಡೆಸಿಕೊಂಡು ಬರುತ್ತಿರುವ ಸಂವಾದ.ಕಾಂ ಬಳಗ ಈಗ ಕೃಷ್ಣನ್ ಲವ್ ಸ್ಟೋರಿ ಯಶಸ್ಸಿನ ಕಾರಣ ಹುಡುಕಿ ಹೊರಟಿದೆ. ಸಿನಿಮಾ ಆಸಕ್ತರನ್ನು ಒಂದೆಡೆ ಸೇರಿಸಿ, ಚಿತ್ರತಂಡದೊಡನೆ ಒಂದಿಷ್ಟು ಚರ್ಚೆ, ಹರಟೆ,ವಾದ ಹಾಗೂ ಕುಶಲೋಪರಿಯನ್ನು ವಿನಿಮಯ ಮಾಡಿಕೊಳ್ಳಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದಿನಾಂಕ ಮತ್ತು ಸಮಯ: 1st August 2010, ಭಾನುವಾರ· 10:00am - 4:45pm
ಸ್ಥಳ:ಸಾಗರ್ ಚಿತ್ರಮಂದಿರ ಮತ್ತು ಹೋಟೆಲ್ ಅಡಿಗ ರೆಸಿಡೆನ್ಸಿ ಸಭಾಂಗಣ, ಗಾಂಧಿನಗರ
ಕಾರ್ಯಕ್ರಮಕ್ಕೆ ಶುಲ್ಕವೇನಾದರೂ ನಿಗದಿ ಮಾಡಲಾಗಿದೆಯೆ?
ಈ ಕಾರ್ಯಕ್ರಮವನ್ನು ಲಾಭರಹಿತವಾಗಿ ಆಯೋಜಿಸಿದ್ದೇವಾದರೂ ಖರ್ಚು ವೆಚ್ಚವನ್ನು ತೂಗಿಸಿಕೊಳ್ಳಲು ರು.100 ನ್ನು ಪ್ರವೇಶ ಶುಲ್ಕವೆಂದು ನಿಗದಿಗೊಳಿಸಲಾಗಿದೆ ಎಂದು ಸಂವಾದ ಡಾಟ್.ಕಾಂನ ಅರೇಹಳ್ಳಿ ರವಿ ಹೇಳಿದರು.
ಸಂವಾದದ ಸಮಯ:ಮಧ್ಯಾಹ್ನ 2 ಗಂಟೆಯಿಂದ ಚರ್ಚೆ ನಡೆಯಲಿದೆ. 3.30 ರಿಂದ 3.45 ರವರೆಗೆ ಕಾಫಿ ಬಿಡುವು.
ಕೊನೆಯ ಒಂದು ಗಂಟೆ 3.45ರಿಂದ 4.45ರ ವರೆಗೆ ಪ್ರೇಕ್ಷಕರೊಡನೆ ನೇರ ಸಂವಾದವಿರುತ್ತದೆ.
ಭಾಗವಹಿಸುವವರು:
ನಿರ್ದೇಶಕ ಶಶಾಂಕ್,
ಛಾಯಾಗ್ರಾಹಕ ಶೇಖರಚಂದ್ರ
ಅಜಯ್,
ರಾಧಿಕಾ ಪಂಡಿತ್,
ಚಂದ್ರು,
ಅಚ್ಯುತ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಪಾಸ್ ಮತ್ತು ಇತರೆ ವಿವರಗಳಿಗೆ ಸಂಪರ್ಕಿಸಿ:
99004 39930 ಮತ್ತು 97317 55966
ಕನ್ನಡಸಾಹಿತ್ಯ.ಕಾಂನ ಅಂಗವಾದ ಸಂವಾದ.ಕಾಂ ಈಗಾಗಲೇ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ, ಸಿನಿಮಾ ಶಿಬಿರ,ವಿಮುಕ್ತಿ, ಕಬ್ಬಡ್ಡಿ, ಮನಸಾರೆ ಮುಂತಾದ ಚಿತ್ರಗಳ ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿ ಸೈ ಎನಿಸಿಕೊಂಡಿದೆ.


Click it and Unblock the Notifications











