ಲೈಫು ಇಷ್ಟೇನೆ...! ಯಾರದ್ದು.., ಯಾಕೆ?

ಪಂಚರಂಗಿ ಚಿತ್ರದ ಹಾಡೊಂದರ ಸಾಲನ್ನೇ ಸಿನಿಮಾ ಶೀರ್ಷಿಕೆಯಾಗಿಸಿಕೊಂಡಿರುವ ಚಿತ್ರ "ಲೈಫು ಇಷ್ಟೇನೆ...! ಸೆಪ್ಟೆಂಬರ್ ತಿಂಗಳ 9ನೇ ದಿನಾಂಕದಂದು ತೆರೆಗೆ ಬರಲು ರೆಡಿಯಾಗಿದೆ. ದಿಗಂತ್ ನಾಯಕರಾಗಿರುವ ಈ ಚಿತ್ರಕ್ಕೆ ಯೋಗರಾಜ ಭಟ್ಟರ ಶಿಷ್ಯ ಪವನ್ ಕುಮಾರ್ ಕಥೆ ಹಾಗೂ ನಿರ್ದೇಶನವಿದೆ.
'ಯೋಗರಾಜ್ ಪ್ರೆಸೆಂಟ್ಸ್' ಎಂಬ ಆರಂಭದೊಂದಿಗೆ ಪ್ರಾರಂಭವಾಗಲಿರುವ ಈ ಚಿತ್ರ ಭಟ್ಟರ ಮೇಕಿಂಗ್ ನೆರಳಿನಿಂದ ಹೊರಬಂದಿರಬಹುದೇ? ಪವನ್ ಕುಮಾರ್ ಕ್ರಿಯೇಟಿವಿಟಿ ಗೊತ್ತಿಲ್ಲದ ಜನ ಭಟ್ಟರ ಪವನ್ ಗೆ ಹೊಸ ಇಮೇಜು ನೀಡಬಹುದೇ! ಉತ್ತರ ಸಿಗಲಿದೆ... ಸೆಪ್ಟೆಂಬರ್ ನಲ್ಲಿ.
ತುಂಬಾ ದಿನಗಳಿಂದ ದೊಡ್ಡ ಬ್ರೇಕ್ ಗಾಗಿ ಕಾಯುತ್ತಿರುವ ಭಟ್ಟರ ಟೀಮ್ ಖಾಯಂ ನಟ ದಿಗಂತ್, ಈ ಚಿತ್ರದ ಮೂಲಕ ಮತ್ತೆ ಲೈಮ್ ಲೈಟ್ ಗೆ ಬರುವುದು ಗ್ಯಾರಂಟಿ ಎಂಬುದು ಎಲ್ಲರ ಲೆಕ್ಕಾಚಾರ. ಬಹಳಷ್ಟು ನಿರೀಕ್ಷೆಯನ್ನಂತೂ ಮೂಡಿಸಿರುವ ಲೈಫು ಇಷ್ಟೇನೆ ಚಿತ್ರದ ನಾಯಕಿಯರು ಸಿಂಧು ಮತ್ತು ಸಂಯುಕ್ತಾ ಬೆಳವಾಡಿ. ರಮ್ಯಾ ಬಾರ್ನೆ ಗೆಸ್ಟ್ ರೋಲ್ ನಲ್ಲಿ ಮಿಂಚಿಂಗ್!
ಲೈಫು ಇಷ್ಟೇನೆ...! ಅಂದುಕೊಂಡು ಲೈಫಿನಲ್ಲಿ ಸ್ವಲ್ಪ ಬದಲಾವಣೆಗಾಗಿ ಬರಲಿರುವ ಜನರಿಗೆ ಸಿನಿಮಾ ಇಷ್ಟೇನಾ! ಅನ್ನಿಸದಿದ್ದರೆ ಸಾಕು. ಹಾಗಾಗುವುದಿಲ್ಲ ಎಂದು ದಿಗಂತ್ ಹಾಗೂ ಪವನ್ ವಿಶ್ವಾಸದಿಂದ ಹೇಳುತ್ತಾರೆ...


Click it and Unblock the Notifications











