ಅಂತರ್ಜಾತಿ ವಿವಾಹಕ್ಕೆ ಸಾಥ್ ನೀಡಿದ ಮಾಲಾಶ್ರೀ

By Rajendra

ಯವಕ, ಯುವತಿ ಅನೇಕ ದಿನಗಳಿಂದ ಪ್ರೀತಿಸುತ್ತಿರುತ್ತಾರೆ. ಕಡೆಗೊಂದು ದಿನ ವಿವಾಹವಾಗಲು ನಿಶ್ಚಯಿಸುತ್ತಾರೆ. ಇವರ ವಿವಾಹಕ್ಕೆ ಜಾತಿ ಅಡ್ದಗಾಲು ಹಾಕುತ್ತದೆ. ಅಂತರ್ಜಾತಿ ವಿವಾಹಕ್ಕೆ ಪ್ರೇಮಿಗಳ ಪೋಷಕರ ವಿರೋಧವಿರುತ್ತದೆ. ಉಭಯ ಬಣದವರ ಜಗಳ ತಾರಕಕ್ಕೇರುತ್ತದೆ. ಆಗ ಅಲ್ಲಿಗೆ 'ಶಕ್ತಿ'ಯ ಆಗಮನ.

"ಜಾತಿ, ಮತ, ಧರ್ಮ ಇವೆಲ್ಲಾ ನಮ್ಮನ್ನು ಗುರುತಿಸಿಕೊಳ್ಳುವುದಕ್ಕೊಸ್ಕರ ಮಾಡಿರುವುದು. ಆದರೆ ಇದಕ್ಕೆಲ್ಲಾ ಮೀರಿದ್ದು ಪ್ರೀತಿ ಎಂದು ಕನಸಿನ ರಾಣಿ ಪೋಷಕರ ಮನ ಒಲಿಸಲು ಪ್ರಯತ್ನಿಸುತ್ತಾರೆ. ಆದರೆ ಅವರು ನಾಯಕಿಯ ಮಾತನ್ನು ಕೇಳುವುದಿಲ್ಲ. ಆಗ 'ಶಕ್ತಿ' ಪ್ರೇಮಿಗಳನ್ನು ತನ್ನೊಂದಿಗೆ ಕರೆದುಕೊಂಡು ಹೊರಟಾಗ, ಪ್ರೇಮಿಗಳ ಕಡೆಯವರು ಹಿಂಬಾಲಿಸುತ್ತಾರೆ. ಇಬ್ಬರ ನಡುವೆ ಮಾರಾಮಾರಿಯಾಗುತ್ತದೆ.

ಈ ಚೇಸಿಂಗ್ ಹಾಗೂ ಸಾಹಸ ಸನ್ನಿವೇಶವನ್ನು ರಾಮು ಎಂಟರ್ ಪ್ರೈಸಸ್‌ನ 'ಶಕ್ತಿ' ಚಿತ್ರಕ್ಕಾಗಿ ನಿರ್ದೇಶಕ ಅನಿಲ್ ಮೈಸೂರಿನ ಸುತ್ತಮುತ್ತ ಚಿತ್ರಿಸಿಕೊಂಡರು. ಕನಸಿನ ರಾಣಿ ಮಾಲಾಶ್ರೀ ಹಾಗೂ ಸಹಕಲಾವಿದರು ಅಭಿನಯಿಸಿದ ಈ ಸನ್ನಿವೇಶಕ್ಕೆ ರಾಂಲಕ್ಶ್ಮಣ್ ಸಾಹಸ ನಿರ್ದೇಶನ ಮಾಡಿದ್ದಾರೆ. ಮಾಲಾಶ್ರೀ ಅವರು ಯಾವುದೇ ಡ್ಯೂಪ್ ಬಳಸದೆ ನೈಜವಾಗಿ ಸಾಹಸ ಸನ್ನಿವೇಶದಲ್ಲಿ ಅಭಿನಯಿಸಿದ್ದರು.

ಚೊಚ್ಚಲ ಚಿತ್ರವನ್ನು ನಿರ್ದೇಶಿಸುತ್ತಿರುವ ಅನಿಲ್ 'ಶಕ್ತಿ'ಗೆ ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ. ಮಾಲಾಶ್ರೀ ಅವರು ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಹೇಮಾಚೌಧರಿ, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ. ಥ್ರಿಲ್ಲರ್‌ಮಂಜು, ರವಿವರ್ಮ, ರಾಮ್‌ಲಕ್ಷ್ಮಣ್ ಮತ್ತು ಪಳನಿರಾಜ್ ಸಾಹಸ ನಿರ್ದೇಶನ, ಸುಧಾಕರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada actress Malashri supports inter caste marriage in her upcoming movie Shakti. Recently this scene had shot at Mysore. The movie is directed by Anil, the film is being produced by Ramu on Ramu Enterprises banner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X