ರಮ್ಯಾಗೆ ಅಭಿಮಾನಿಯ ಮರೆಯಲಾಗದ ಉಡುಗೊರೆ
ಸಾಮಾನ್ಯವಾಗಿ ಯಾರಾದರೂ ಗಿಫ್ಟ್ ಕೊಟ್ಟರೆ ಅದು ನೂರ್ಕಾಲ ನೆನಪಿನಲ್ಲಿ ಉಳಿಯುವಂತಿರಬೇಕು. ಹಾಗೆಯೇ ಮತ್ತೆ ಮತ್ತೆ ಕಾಡುವಂತಿರಬೇಕು. ಆಗಲೇ ಗಿಫ್ಟ್ ಕೊಟ್ಟವರಿಗೂ ತೆಗೆದುಕೊಂಡವರಿಗೂ ಸಾರ್ಥಕ ಅನ್ನಿಸುತ್ತದೆ. ಈ ರೀತಿಯ ಗಿಫ್ಟ್ ಒಂದನ್ನು ಗೋಲ್ಡನ್ ಗರ್ಲ್ ರಮ್ಯಾಗೆ ಅಭಿಮಾನಿಯೊಬ್ಬರು ಕೊಟ್ಟಿದ್ದಾರೆ. ರಮ್ಯಾಗೆ ಕೊಟ್ಟ ಗಿಫ್ಟ್ ನೀವೂ ನೋಡಿ ಆನಂದಿಸಿ.
ಅವರು ರಮ್ಯಾಗೆ ಗಿಫ್ಟ್ ಕೊಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಉಡುಗೊರೆ ನೀಡಿ ರಮ್ಯಾರ ಮನ ಗೆದ್ದಿದ್ದಾರೆ. ರಮ್ಯಾರ ಮನಗೆದ್ದ ಅಪ್ಪಟ ಅಭಿಮಾನಿ ಹೆಸರು ಮೋಹನ್ ಪುಟ್ಟಗವಿರಂಗಪ್ಪ. ಇವರು ರಮ್ಯಾ ಅವರಿಗೆಂದೇ ವಿಶೇಷ ವಿಡಿಯೋವನ್ನು ಮಾಡಿ ಅವರಿಗೆ ಅರ್ಪಿಸಿದ್ದಾರೆ.
ಈ ವಿಡಿಯೋ ಮೋಹನ್ ಅವರ ಅಪ್ಪಟ ಅಭಿಮಾನಕ್ಕೆ ನಿದರ್ಶನ. ರಮ್ಯಾ ಬಗೆಗಿನ ಅವರ ಪರಿಕಲ್ಪನೆಗಳಿಗೆ ವಿಡಿಯೋ ರೂಪ ನೀಡಿದ್ದಾರೆ. ಇದು ಅವರ ಸ್ವಂತ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ವಿಡಿಯೋ. ಅಂದಹಾಗೆ ಮೋಹನ್ ಖಾಸಗಿ ಜಾಹೀರಾತು ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.
More from Filmibeat
English summary
Golden girl Ramya celebrating her 29th birthday. Her beloved fan Mohan Puttagavirangappa gave a small birthday gift to her. He sent a special video gift to actress Ramya. The entire video is his concept and also created by him. He says, this is dedicated to Ramya.


Click it and Unblock the Notifications











